ಮಾ.27 ರಂದು ಲೋಕಸಭೆಯಲ್ಲಿ ಜಿಎಸ್ ಟಿಗೆ ಸಂಬಂಧಿಸಿದ ಮಸೂದೆಗಳ ಮಂಡನೆ

ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಗೆ ಸಂಬಂಧಿಸಿದ 4 ಮಸೂದೆಗಳು ಮಾ.27 ರಂದು ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
ಮಾ.27 ರಂದು ಲೋಕಸಭೆಯಲ್ಲಿ ಜಿಎಸ್ ಟಿಗೆ ಸಂಬಂಧಿಸಿದ ಮಸೂದೆಗಳ ಮಂಡನೆ
ಮಾ.27 ರಂದು ಲೋಕಸಭೆಯಲ್ಲಿ ಜಿಎಸ್ ಟಿಗೆ ಸಂಬಂಧಿಸಿದ ಮಸೂದೆಗಳ ಮಂಡನೆ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಗೆ ಸಂಬಂಧಿಸಿದ 4 ಮಸೂದೆಗಳು ಮಾ.27 ರಂದು ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. 
4 ಮಸೂದೆಗಳಿಗೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸಂಸತ್ ನಲ್ಲಿ ಮಂಡನೆ ಮಾಡಿ ಅಂಗೀಕರಿಸುವುದಷ್ಟೇ ಬಾಕಿ ಇದೆ. ವಿಸ್ತೃತ ಚರ್ಚೆ ನಡೆಸಿ ಜಿ.ಎಸ್.ಟಿ ಕೌನ್ಸಿಲ್ ಒಪ್ಪಿಗೆ ನೀಡಿದ್ದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಸಿ.ಜಿ.ಎಸ್.ಟಿ) ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ (ರಾಜ್ಯಗಳಿಗೆ ಪರಿಹಾರ ನೀಡುವ ಮಸೂದೆ)-2017 ಕ್ಕೆ ಕೇಂದ್ರ ಸಚಿವ ಸಂಪುಟದಲ್ಲೂ ಅನುಮೋದನೆ ದೊರೆತಿದೆ. ಇದರೊಂದಿಗೆ ಸೀಮಾ ತೆರಿಗೆ, ಅಬಕಾರಿ ತೆರಿಗೆ ತಿದ್ದುಪಡಿ ಕಾಯ್ದೆಗೂ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದ್ದು. ಸೋಮವಾರ (ಮಾ.27 
ರಂದು ಮಸೂದೆಗಳನ್ನು ಮಂಡನೆ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಜುಲೈ 1 ರಿಂದ ಜಿಎಸ್ ಟಿ ಜಾರಿಗೆ ಸರ್ಕಾರದ ಪ್ರಸ್ತಾವನೆ 
ಜಿಎಸ್ ಟಿ ಮಸೂದೆಯನ್ನು ತುರ್ತಾಗಿ ಜಾರಿಗೊಳಿಸಬೇಕಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಈಗಾಗಲೇ ಹೇಳಿದ್ದು, ಜುಲೈ 1 ರಿಂದ ಜಾರಿಗೊಳಿಸಲು ಉದ್ದೇಶಿಸಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com