ಇನ್ನು ವಿಮಾನಯಾನ ಸಂಸ್ಥೆಗಳು ರವೀಂದ್ರ ಗಾಯಕ್ ವಾಡ್ ನ್ನು ಕಪ್ಪು ಪಟ್ಟಿಗೆ ಸೇರಿಸಿರುವುದನ್ನು ಖಂಡಿಸಿ ಶಿವಸೇನೆ ಸಂಸತ್ ನಲ್ಲಿ ನಿಲುವಳಿ ಸೂಚನೆ ಮಂಡಿಸಲು ಸಿದ್ಧತೆ ನಡೆಸಿದೆ. ವಿಮಾನದಲ್ಲಿ ಸೀಟಿನ ವಿಷಯವಾಗಿ ನಡೆದ ಜಗಳದಲ್ಲಿ ಸಂಸದ ರವೀಂದ್ರ ಗಾಯಕ್ ವಾಡ್ ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು. ಅಷ್ಟೇ ಅಲ್ಲದೇ ತಾವು ತೋರಿದ ದುರ್ವರ್ತನೆಗೆ ಕ್ಷಮೆ ಕೇಳಲೂ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ರವೀಂದ್ರ ಗಾಯಕ್ ವಾಡ್ ನಡೆಯನ್ನು ಪ್ರತಿಭಟಿಸಿದ್ದ 6 ಕ್ಕೂ ಹೆಚ್ಚು ವಿಮಾನ ಯಾನ ಸಂಸ್ಥೆಗಳು ಸಂಸದನನ್ನು ಕಪ್ಪು ಪಟ್ಟಿಗೆ ಸೇರಿಸಿದ್ದವು. ಇಷ್ಟೆಲ್ಲಾ ಆದರೂ ಶಿವಸೇನೆ ತನ್ನ ಸಂಸದನ ಪರವಾಗಿ ಮಾತನಾಡುತ್ತಿದ್ದು ಉಸ್ಮಾನಾಬಾದ್ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವ ಸಂಸದ ರವೀಂದ್ರ ಗಾಯಕ್ ವಾಡ್ ನ್ನು ಬೆಂಬಲಿಸಿ ಉಸ್ಮಾನಾಬಾದ್ ಬಂದ್ ಗೆ ಕರೆ ನೀಡಿದೆ.