ಖಾಸಗಿತನ ಏನಾದರೂ ಉಳಿದಿದೆಯೇ? ಸಚಿವ ರವಿಶಂಕರ್ ಪ್ರಸಾದ್ ಗೆ ಸಾಕ್ಷಿ ಸಿಂಗ್ ಪ್ರಶ್ನೆ

ಆಧಾರ್ ಕಾರ್ಡಿನ ನೋಂದಣಿ ಸೇವೆ ಒದಗಿಸುವ ಸಂಸ್ಥೆ ಸಿಎಸ್ ಸಿ ಇ-ಗವರ್ನೆನ್ಸ್ ಟ್ವಿಟ್ಟರ್ ನಲ್ಲಿ....
ಎಂ.ಎಸ್.ಧೋನಿ ಮತ್ತು ಸಾಕ್ಷಿ ಸಿಂಗ್
ಎಂ.ಎಸ್.ಧೋನಿ ಮತ್ತು ಸಾಕ್ಷಿ ಸಿಂಗ್
Updated on
ನವದೆಹಲಿ: ಆಧಾರ್ ಕಾರ್ಡಿನ  ನೋಂದಣಿ  ಸೇವೆ ಒದಗಿಸುವ ಸಂಸ್ಥೆ ಸಿಎಸ್ ಸಿ ಇ-ಗವರ್ನೆನ್ಸ್ ಟ್ವಿಟ್ಟರ್ ನಲ್ಲಿ ತಮ್ಮ  ಪತಿಯ ಖಾಸಗಿ ಮಾಹಿತಿಗಳನ್ನು ಹಾಕಿರುವುದನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ವಿರೋಧಿಸಿದ್ದಾರೆ.
ನಿನ್ನೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಟ್ವೀಟ್ ಮಾಡಿ ಕ್ರಿಕೆಟ್ ಆಟಗಾರ ಎಂ.ಎಸ್.ಧೋನಿಯವರಿಗೆ ಆಧಾರ್ ಸೇವೆಯನ್ನು ಒದಗಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಸಿಎಸ್ ಸಿ ಇ-ಆಡಳಿತ ತಮ್ಮ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಎಂ.ಎಸ್.ಧೋನಿಯವರ ಆಧಾರ್ ಕಾರ್ಡಿನ ಅರ್ಜಿಯ ಚಿತ್ರವನ್ನು ಪೋಸ್ಟ್ ಮಾಡಿತ್ತು. ಇದನ್ನು ಗಮನಿಸಿದ ಸಾಕ್ಷಿ ಧೋನಿ ತಕ್ಷಣವೇ ಸಚಿವರಾದ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟ್ ಮಾಡಿದರು. 
ಸಾಕ್ಷಿಯವರ ಟ್ವೀಟ್ ನಲ್ಲಿ ಹೀಗೆ ಬರೆದಿತ್ತು. '' ಇನ್ನು ಖಾಸಗಿತನವೆಂಬುದು ಏನಾದರೂ ಉಳಿದಿದೆಯೇ? ತಮ್ಮ ಪತಿಯ ಆಧಾರ್ ಕಾರ್ಡಿನ ಮಾಹಿತಿ ಜೊತೆಗೆ ಅರ್ಜಿಯನ್ನು ಸಾರ್ವಜನಿಕ ಆಸ್ತಿಯೆಂದು ಬಹಿರಂಗಪಡಿಸಲಾಗಿದೆ, ಇದರಿಂದ ತೀವ್ರ ಬೇಸರಗೊಂಡಿದ್ದೇನೆ''. ಎಂದು ಟ್ವೀಟ್ ಮಾಡಿದ್ದರು.
ಇದರಿಂದ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಗೊಂದಲವುಂಟಾಯಿತು. ''ಇಲ್ಲ ಇದು ಸಾರ್ವಜನಿಕ ಸ್ವತ್ತು ಅಲ್ಲ, ಇದರಲ್ಲಿ ಏನಾದರೂ ಖಾಸಗಿ ಮಾಹಿತಿಗಳಿವೆಯೇ'' ಎಂದು ಕೇಳಿದರು.
ಅದಕ್ಕೆ ಸ್ಪಷ್ಟನೆ ನೀಡಿದ ಎಂ.ಎಸ್.ಧೋನಿಯವರ ಪತ್ನಿ ಸಾಕ್ಷಿ ಧೋನಿ, ಸಿಎಸ್ ಸಿ ಇ-ಗವರ್ನೆನ್ಸ್ ಪೋಸ್ಟ್ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್ ತೆಗೆದು ಫೋಟೋ ಕಳುಹಿಸಿದರು. ಅದರಲ್ಲಿ ಎಂ.ಎಸ್.ಧೋನಿಯವರ ಆಧಾರ್ ಕಾರ್ಡಿನ ಮಾಹಿತಿಯಿದ್ದಿತು. ಅದನ್ನು ಸಚಿವ ರವಿಶಂಕರ್ ಪ್ರಸಾದ್ ಅವರು ಕೂಡ ಗಮನಿಸದೆ ಸಿಎಸ್ ಸಿ ಇ-ಆಡಳಿತದ ಟ್ವೀಟ್ ಗೆ ರಿಟ್ವೀಟ್ ಮಾಡಿದ್ದರು.
ತಕ್ಷಣವೇ ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಮ್ಮ ಗಮನಕ್ಕೆ ವಿಷಯವನ್ನು ತಂದದ್ದಕ್ಕಾಗಿ ಸಾಕ್ಷಿ ಸಿಂಗ್ ಗೆ ಧನ್ಯವಾದ ಹೇಳಿದರು. ತಕ್ಷಣವೇ ಟ್ವೀಟ್ ಮಾಡಿದ ರವಿಶಂಕರ್ ಪ್ರಸಾದ್, ನನ್ನ ಗಮನಕ್ಕೆ ವಿಷಯ ತಂದದ್ದಕ್ಕಾಗಿ ಧನ್ಯವಾದಗಳು. ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುವುದು ಅಕ್ರಮ. ಇದರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com