ವಂದೇ ಮಾತರಂ ಹಾಡಲು ನಕಾರ: ಸಭೆಯಲ್ಲಿ ಭಾಗವಹಿಸದಂತೆ ಮೀರತ್ ಪುರಸಭೆ ಸದಸ್ಯರಿಗೆ ನಿಷೇಧ

ವಂದೇ ಮಾತರಂ ಹಾಡಲು ನಿರಾಕರಿಸಿದ ಮೀರತ್ ಪುರಸಭೆ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿದೆ.
ವಂದೇ ಮಾತರಂ ಹಾಡಲು ನಕಾರ: ಸಭೆಯಲ್ಲಿ ಭಾಗವಹಿಸದಂತೆ ಮೀರತ್ ಪುರಸಭೆ ಸದಸ್ಯರಿಗೆ ನಿಷೇಧ
ವಂದೇ ಮಾತರಂ ಹಾಡಲು ನಕಾರ: ಸಭೆಯಲ್ಲಿ ಭಾಗವಹಿಸದಂತೆ ಮೀರತ್ ಪುರಸಭೆ ಸದಸ್ಯರಿಗೆ ನಿಷೇಧ
ಮೀರತ್: ವಂದೇ ಮಾತರಂ ಹಾಡಲು ನಿರಾಕರಿಸಿದ ಮೀರತ್ ಪುರಸಭೆ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿದೆ. 
ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಆಡಳಿತಾರೂಢ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈ ವೇಳೆ ಕೆಲವು ಸದಸ್ಯರು ವಂದೇ ಮಾತರಂ ಹಾಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿರುವ ನಿರ್ಣಯವನ್ನು ಮೇಯರ್ ಹರಿಕಾಂತ್ ಅಹ್ಲುವಾಲಿಯಾ ಪ್ರಕಟಿಸಿದ್ದಾರೆ. 
ವಂದೇ ಮಾತರಂ ಗೀತೆಯನ್ನು ಹಾಡಲು 7 ಕಾರ್ಪೊರೇಟರ್ ಗಳು ನಿರಾಕರಿಸಿದ್ದು, ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಉಳಿದ ಸದಸ್ಯರುಗಳು ವಂದೇ ಮಾತರಂ ಹಾಡಲು ಪ್ರಾರಂಭಿಸುತ್ತಿದ್ದಂತೆಯೇ 7 ಸದಸ್ಯರು ಸಭೆಯಿಂದ ಹೊರ ನಡೆದಿದ್ದಾರೆ. 
ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಮೇಯರ್ ಹರಿಕಾಂತ್ ಅಹ್ಲುವಾಲಿಯಾ ರಾಷ್ಟ್ರಗೀತೆ ಹಾಡುವಂತೆ ಎಲ್ಲಾ ಸದಸ್ಯರಿಗೂ ಸೂಚನೆ ನೀಡಿದರು. ಇದೇ ವೇಳೆಯಲ್ಲಿ ಬಿಜೆಪಿ ಕೌನ್ಸಿಲರ್ ಗಳು ಹಿಂದೂಸ್ಥಾನದಲ್ಲಿರಬೇಕಾದರೆ ವಂದೇ ಮಾತರಂ ಹೇಳಬೇಕು ಎಂದು ಘೋಷಣೆ ಕೂಗಿದ್ದರು. ಈ ಬೆನಲ್ಲೇ  ವಿರೋಧಪಕ್ಷದ ಕೆಲವು ಸದಸ್ಯರು ಸಭೆಯಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com