ಸಂಜಯ್ ಚಂದ್ರ ಅವರ ಸಹೋದರನನ್ನೂ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಬಂಧಿಸಲಾಗಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಎಲ್ಲಾ ಆರೋಪಿಗಳನ್ನೂ ಕೋರ್ಟ್ ಎದುರು ಹಾಜರುಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಯುನಿಟೆಕ್ ರಿಯಲ್ ಎಸ್ಟೇಟ್ ಯೋಜನೆಯ ಮೂಲಕ ಒಂದಷ್ಟು ಜನರು ಫ್ಲಾಟ್ ಗಳನ್ನು ಬುಕ್ ಮಾಡಿದ್ದರು. ಆದರೆ ಖರೀದಿಸಿರುವವರಿಗೆ ಫ್ಲಾಟ್ ನ್ನೂ ನೀಡದೇ ಹಣವನ್ನೂ ವಾಪಸ್ ಮಾಡದೇ ಮೋಸ ಮಾಡಿರುವ ಆರೋಪ ಸುರೇಶ್ ಚಂದ್ರ ವಿರುದ್ಧ ಕೇಳಿಬಂದಿದ್ದು, ಅಕ್ರಮ ಹಣ ವರ್ಗಾವಣೆಯ ಆರೋಪವೂ ಕೇಳಿಬಂದಿದೆ. ಸಂಜಯ್ ಚಂದ್ರ ಇದಕ್ಕೂ ಮುನ್ನ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದರು.