ಗ್ರಾಮೀಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ ಮೊಬೈಲ್ ಇಂಟರ್ ನೆಟ್ ಬಳಕೆ: ಸಮೀಕ್ಷೆ

ಮೊಬೈಲ್ ನಲ್ಲಿ ಅಂತರ್ಜಾಲ ಬಳಕೆ ಮಾಡುವವರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಬೆಳೆಯುತ್ತಿದ್ದು, ಶೇ.26 ರಷ್ಟು ಬೆಳವಣಿಗೆಯಾಗುತ್ತಿದೆ ಎಂದು ಜಂಟಿ ಸಮೀಕ್ಷೆಯೊಂದು ಹೇಳಿದೆ.
ಗ್ರಾಮೀಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ ಮೊಬೈಲ್ ಇಂಟರ್ ನೆಟ್ ಬಳಕೆ: ಸಮೀಕ್ಷೆ
ಗ್ರಾಮೀಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ ಮೊಬೈಲ್ ಇಂಟರ್ ನೆಟ್ ಬಳಕೆ: ಸಮೀಕ್ಷೆ
ನವದೆಹಲಿ: ಮೊಬೈಲ್ ನಲ್ಲಿ ಅಂತರ್ಜಾಲ ಬಳಕೆ ಮಾಡುವವರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಬೆಳೆಯುತ್ತಿದ್ದು, ಶೇ.26 ರಷ್ಟು ಬೆಳವಣಿಗೆಯಾಗುತ್ತಿದೆ ಎಂದು ಜಂಟಿ ಸಮೀಕ್ಷೆಯೊಂದು ಹೇಳಿದೆ.  
ಅಕ್ಟೋಬರ್ ರ2015 ನಿಂದ 16 ರ ಅಕ್ಟೋಬರ್ ವರೆಗೆ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಶೇ.15 ರಷ್ಟು ಏರಿಕೆ ಕಂಡಿದೆ ಎಂದು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(ಐಎಎಂಎಐ) ಹಾಗೂ ಐಎಂಆರ್ ಬಿ ಹೇಳಿದೆ. ಭಾರತದ ನಗರ ಪ್ರದೇಶಗಳು ಶೇ.9 ರಷ್ಟು ಬೆಳವಣಿಗೆ ದಾಖಲಿಸಿದ್ದರೆ ಗ್ರಾಮೀಣ ಪ್ರದೇಶಗಳು ಶೇ.26 ರಷ್ಟು ಬೆಳವಣಿಗೆ ದಾಖಲಿಸಿದ್ದು, ಭವಿಷ್ಯದ ಮಾರುಕಟ್ಟೆಯ ಶೇ.16 ರಷ್ಟನ್ನು ಗ್ರಾಮೀಣ ಭಾರತ ವ್ಯಾಪಿಸಲಿದೆ ಎಂದು ವರದಿ ತಿಳಿಸಿದೆ. 
ಜೂನ್ 2017 ರ ವೇಳೆಗೆ ಭಾರತದಲ್ಲಿರುವ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ 420 ಮಿಲಿಯನ್ ದಾಟಲಿದ್ದು, ಕರೆಗಳಿಗಿಂತ ಮೊಬೈಲ್ ಇಂಟರ್ ನೆಟ್ ಬಳಕೆ ಹೆಚ್ಚಾಗಿರುವುದು ಸಮೀಕ್ಷೆಯ ಮೂಲಕ ತಿಳಿದುಬಂದಿದೆ. ಭಾರತದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು, ವಿದ್ಯಾರ್ಥಿಗಳು ಹೆಚ್ಚಿದ್ದು ಭಾರತದ  ಜನಸಂಖ್ಯೆಯೇ ಮೊಬೈಲ್ ಇಂಟರ್ ನೆಟ್ ಹೆಚ್ಚು ಬಳಕೆಯಾಗಲು ಕಾರಣ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com