ಮಧ್ಯಪ್ರದೇಶ
ಮಧ್ಯಪ್ರದೇಶ

ಆರ್ಥಿಕ ವರ್ಷ ಬದಲು ಮಾಡಿದ ಮಧ್ಯಪ್ರದೇಶ ಸರ್ಕಾರ

ಆರ್ಥಿಕ ವರ್ಷವನ್ನು ಏಪ್ರಿಲ್-ಮಾರ್ಚ್ ನಿಂದ ಜನವರಿ-ಡಿಸೆಂಬರ್ ಗೆ ಬದಲಾವಣೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ಚಿಂತನೆಯನ್ನು ಮಧ್ಯಪ್ರದೇಶ ಸರ್ಕಾರ ಅಳವಡಿಸಿಕೊಂಡಿದೆ.
ಭೋಪಾಲ್: ಆರ್ಥಿಕ ವರ್ಷವನ್ನು ಏಪ್ರಿಲ್-ಮಾರ್ಚ್ ನಿಂದ ಜನವರಿ-ಡಿಸೆಂಬರ್ ಗೆ ಬದಲಾವಣೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ಚಿಂತನೆಯನ್ನು ಮಧ್ಯಪ್ರದೇಶ ಸರ್ಕಾರ ಅಳವಡಿಸಿಕೊಂಡಿದೆ.
ಮಧ್ಯಪ್ರದೇಶ ಸರ್ಕಾರದ ತೀರ್ಮಾನದಂತೆ ಆರ್ಥಿಕ ವರ್ಷ ಬದಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಬಜೆಟ್ ಡಿಸೆಂಬರ್ ನಲ್ಲಿ ಮಂಡನೆಯಾಗಲಿದೆ. ಆರ್ಥಿಕ ವರ್ಷವನ್ನು ಏಪ್ರಿಲ್-ಮಾರ್ಚ್ ನಿಂದ ಜನವರಿ-ಡಿಸೆಂಬರ್ ಗೆ ಬದಲಾವಣೆ ಮಾಡುವ ಬಗ್ಗೆ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. 
ಆರ್ಥಿಕ ವರ್ಷದ ಬದಲಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಗಡುವು ವಿಧಿಸಲಿಲ್ಲವಾದರೂ ರಾಜ್ಯ ಸರ್ಕಾರಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ಪರಿಗಣಿಸಿ ಮಧ್ಯಪ್ರದೇಶ ಸರ್ಕಾರ ಆರ್ಥಿಕ ವರ್ಷವನ್ನು ಏಪ್ರಿಲ್-ಮಾರ್ಚ್ ನಿಂದ ಜನವರಿ-ಡಿಸೆಂಬರ್ ಗೆ ಬದಲಾವಣೆ ಮಾಡಿದೆ. 

Related Stories

No stories found.

Advertisement

X
Kannada Prabha
www.kannadaprabha.com