ಕೇದಾರನಾಥ ದೇವಾಲಯದಲ್ಲಿ ಶೂ ತೆಗೆಯಲು ಸಹಾಯಕ್ಕೆ ಬಂದ ವ್ಯಕ್ತಿಯನ್ನು ತಡೆದ ಮೋದಿ!

ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ ಸರಳತೆಯ ವ್ಯಕ್ತಿತ್ವವನ್ನು ತೋರಿದ್ದು ಬೇರೆಯವರಿಗೆ ಹೇಳುವುದನ್ನೇ ತಾವೂ ಪಾಲನೆ ಮಾಡುವುದು..
ಕೇದಾರನಾಥ ದೇವಾಲಯದಲ್ಲಿ ಶೂ ತೆಗೆಯಲು ಸಹಾಯಕ್ಕೆ ಬಂದ ವ್ಯಕ್ತಿಯನ್ನು ತಡೆದ ಮೋದಿ
ಕೇದಾರನಾಥ ದೇವಾಲಯದಲ್ಲಿ ಶೂ ತೆಗೆಯಲು ಸಹಾಯಕ್ಕೆ ಬಂದ ವ್ಯಕ್ತಿಯನ್ನು ತಡೆದ ಮೋದಿ
ಕೇದಾರನಾಥ್: ಅಧಿಕಾರ ಸಿಕ್ಕರೆ ಸಾಕು ಕೈಗೊಬ್ಬರು ಸಹಾಯಕರು ಕಾಲಿಗೊಬ್ಬರು ಸಹಾಯಕರನ್ನು ಹೊಂದಿರುವ ರಾಜಕಾರಣಿಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಆದರೆ ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಿನ್ನ ಎಂಬುದು ಮತ್ತೊಮ್ಮೆ ಸಾಬೀತಾದಂತಿದೆ. 
ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ ಸರಳತೆಯ ವ್ಯಕ್ತಿತ್ವವನ್ನು ತೋರಿದ್ದು ಬೇರೆಯವರಿಗೆ ಹೇಳುವುದನ್ನೇ ತಾವೂ ಪಾಲನೆ ಮಾಡುವುದು ಎಂಬುದನ್ನು ತಮ್ಮ ನಡೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
ರುದ್ರಾಭಿಷೇಕ ಮಾಡಲು ದೇವಾಲಯ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ಶೂ ತೆಗೆಯುತ್ತಿದ್ದ ಪ್ರಧಾನಿಗೆ ಸಹಾಯ ಮಾಡಲು ವ್ಯಕ್ತಿಯೊಬ್ಬ ಮುಂದಾಗುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಆ ವ್ಯಕ್ತಿಯನ್ನು ತಮಗೆ ಸಹಾಯ ಮಾಡುವುದರಿಂದ ತಡೆದ್ದಾರೆ. ಈ ವಿಡಿಯೋ ತುಣುಕನ್ನು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. 
ಗಣ್ಯ ವ್ಯಕ್ತಿಗಳ ಕಾರಿನಿಂದ ಕೆಂಪು ಗೂಟವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ವಿವಿಐಪಿ ಸಂಸ್ಕೃತಿ ಅಂತ್ಯಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ವಿವಿಐಪಿ ಸಂಸ್ಕೃತಿಯನ್ನು ಅಂತ್ಯಗೊಳಿಸಲು ಕರೆ ನೀಡಿದ್ದ ಪ್ರಧಾನಿ ಸ್ವತಃ ತಾವೇ ಸರಳತೆಯನ್ನು ಪ್ರದರ್ಶಿಸಿದ್ದು ಮಾದರಿಯಾಗಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com