ರಾಮಗಂಗಾ ನದಿ ದಂಡೆಯಲ್ಲಿ ತ್ಯಾಜ್ಯ ಹಾಕಿದರೆ ರೂ. 1 ಲಕ್ಷ ದಂಡ: ಎನ್‌ಜಿಟಿ

ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿನ ರಾಮಗಂಗಾ ನದಿ ದಂಡೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) 1 ಲಕ್ಷ ದಂಡ ವಿಧಿಸಲಿದೆ...
ರಾಮಗಂಗಾ
ರಾಮಗಂಗಾ
ನವದೆಹಲಿ: ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿನ ರಾಮಗಂಗಾ ನದಿ ದಂಡೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) 1 ಲಕ್ಷ ದಂಡ ವಿಧಿಸಲಿದೆ. 
ರಾಮಗಂಗಾ ನದಿ ದಂಡೆಯಲ್ಲಿ ಇ-ತ್ಯಾಜ್ಯಗಳನ್ನು ಎಸೆಯುವವರು ಪರಿಸರ ಪರಿಹಾರ ರೂಪದಲ್ಲಿ 1 ಲಕ್ಷ ರುಪಾಯಿ ದಂಡ ತೆರಬೇಕಾದಿತು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಧ್ಯಕ್ಷ ಜಸ್ಟಿಸ್ ಸ್ವತಂತ್ರ ಕುಮಾರ್ ಹೇಳಿದ್ದಾರೆ. 
ಜಸ್ಟಿಸ್ ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಸಂಬಂಧಿತ ಇಲಾಖಾ ಪ್ರತಿನಿಧಿಗಳ ಒಂದು ಸಮಿತಿಯನ್ನು ರಚಿಸಿ ರಾಮಗಂಗಾ ನದಿ ದಂಡೆಯಲ್ಲಿ ಗುಡ್ಡೆ ಹಾಕಲಾಗಿರುವ ಇ-ತ್ಯಾಜ್ಯಗಳನ್ನು ಕೂಡಲೇ ಖಾಲಿ ಮಾಡಿಸಿ ಎರಡು ವಾರಗಳ ಒಳಗೆ ವರದಿ ನೀಡುವಂತೆ ಆದೇಶಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com