4 ವರ್ಷದ ಬಾಲಕಿ 'ಹತ್ಯಾಚಾರಿ'ಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಸುಪ್ರೀಂ ಕೋರ್ಟ್

2008ರಲ್ಲಿ 4 ವರ್ಷದ ಬಾಲಕ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ 55 ವರ್ಷದ ಕಾಮುಕನ ಮರು ಪರಿಶೀಲನಾ ಅರ್ಜಿಯನ್ನು...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: 2008ರಲ್ಲಿ 4 ವರ್ಷದ ಬಾಲಕ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ 55 ವರ್ಷದ ಕಾಮುಕನ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಅಪರಾಧಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿದೆ.
ಅಪರಾಧಿಯ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಸ್ರ, ಆರ್.ಎಫ್.ನಾರಿಮನ್ ಹಾಗೂ ಯು ಯು ಲಲಿತ್ ಅವರನ್ನೊಳಗೊಂಡ ಪೀಠ, ನಾಲ್ಕು ವರ್ಷದ ಬಾಲಕಿಯ ಹತ್ಯೆಯ ರೀತಿ ತುಂಬಾ ಘೋರವಾಗಿದ್ದು, ಇದೊಂದು ಅಮಾನವೀಯ ಮತ್ತು ತಲ ತಗ್ಗಿಸುವಂತಹ ಕೃತ್ಯ ಎಂದು ಹೇಳಿದ್ದಾರೆ.
'ಹತ್ಯಾಚಾರಿ' ಮಹಾರಾಷ್ಟ್ರ ಮೂಲದ ವಸಂತ್ ಸಂಪತ್ ದುಪಾರೆ ವಿಚಾರಣಾ ನ್ಯಾಯಾಲಯ ಹಾಗೂ ಬಾಂಬೆ ಹೈಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಯ ತೀರ್ಪನ್ನು ನವೆಂಬರ್ 26, 2014ರಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ದುಪಾರೆ ಸುಪ್ರೀಂ ಕೋರ್ಟ್ ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ದುಪಾರೆ ಸದ್ಯ ನಾಗ್ಪುರ ಜೈಲನಿಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com