ಪಠಾಣ್ ಕೋಟ್
ದೇಶ
ಪಠಾಣ್ ಕೋಟ್: ಅನುಮಾನಸ್ಪದ ಬ್ಯಾಗ್, ಮೊಬೈಲ್ ಟವರ್ ಬ್ಯಾಟರಿ ಪತ್ತೆ, ಹೈ ಅಲರ್ಟ್ ಘೋಷಣೆ
ಪಠಾಣ್ ಕೋಟ್ ಜಿಲ್ಲೆಯಲ್ಲಿರುವ ಸೇನಾ ನೆಲೆಯ ಬಳಿ ಅನುಮಾನಾಸ್ಪದ ಬ್ಯಾಗ್, ಮೊಬೈಲ್ ಟವರ್ ಬ್ಯಾಟರಿ ಪತ್ತೆಯಾಗಿದ್ದು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಪಠಾಣ್ ಕೋಟ್: ಪಠಾಣ್ ಕೋಟ್ ಜಿಲ್ಲೆಯಲ್ಲಿರುವ ಸೇನಾ ನೆಲೆಯ ಬಳಿ ಅನುಮಾನಾಸ್ಪದ ಬ್ಯಾಗ್, ಮೊಬೈಲ್ ಟವರ್ ಬ್ಯಾಟರಿ ಪತ್ತೆಯಾಗಿದ್ದು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಎರಡು ಮೊಬೈಲ್ ಟವರ್ ಬ್ಯಾಟರಿ, 2 ಅನುಮಾನಾಸ್ಪದ ಬ್ಯಾಗ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ನ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಸೇನಾ ನೆಲೆಯ ಬಳಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದೆ ಎಂದು ಶಂಕಿಸಲಾಗಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.
ಅನುಮಾನಾಸ್ಪದ ಬ್ಯಾಗ್ ಹಾಗೂ ಮೊಬೈಲ್ ಟವರ್ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದ್ದು ಪಂಜಾಬ್ ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ