ಜಮ್ಮು: ಹಿಮಪಾತಕ್ಕೆ ಸಿಕ್ಕಿದ ಮಿನಿ ಬಸ್ಸು; ಐವರು ಸಾವು

ಜಮ್ಮು-ಕಾಶ್ಮೀರದ ದೊಡಾ ಜಿಲ್ಲೆಯ ಬ್ಹಡೆರ್ವಾಹ್-ಬಶೊಲಿ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ ಮಿನಿ ಬಸ್ಸು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಡೆರ್ವಾಹ್: ಜಮ್ಮು-ಕಾಶ್ಮೀರದ ದೊಡಾ ಜಿಲ್ಲೆಯ ಬ್ಹಡೆರ್ವಾಹ್-ಬಶೊಲಿ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ ಬಸ್ಸು ಸಿಕ್ಕಿಹಾಕಿಕೊಂಡ ಪರಿಣಾಮ 5 ಮಂದಿ ಸ್ಥಳದಲ್ಲೇ ಮೃತಪಟ್ಟು ಅನೇಕ ಮಂದಿ ಗಾಯಗೊಂಡ ಘಟನೆ ಇಂದು ನಡೆದಿದೆ.
ಬನಿಯಿಂದ ಬಡೆರ್ವಾಹ್ ಗೆ ತೆರಳುತ್ತಿದ್ದ ಮಿನಿ ಬಸ್ಸು ಹಿಮಪಾತಕ್ಕೆ ಸಿಕ್ಕಿ 1500 ಅಡಿ ಪ್ರಪಾತದ ಕಂದಕಕ್ಕೆ ಉರುಳಿ ಹೋಗಿ ಬಿತ್ತು ಎಂದು ಹಿಮ ಮತ್ತು ಮೃತದೇಹಗಳನ್ನು ಹೊರತೆಗೆಯುವ ಕೆಲಸಗಾರರು ವಿವರಿಸಿದ್ದಾರೆ. ಬಡೆರ್ವಾಹ್ ನಿಂದ 38 ಕಿಲೋ ಮೀಟರ್ ದೂರದಲ್ಲಿ ಚತ್ತರ್ ಗಾಲಿ ಪಾಸ್ ನಲ್ಲಿ ಈ ಘಟನೆ ನಡೆದಿದೆ.
ಬಸ್ಸಿನಲ್ಲಿ 12 ಮಂದಿ ಪ್ರಯಾಣಿಕರಿದ್ದರು. ಕಾರ್ಮಿಕರು ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಆರಂಭಿಸಿದ್ದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ ಎಂದು ಬ್ಹಡೆರ್ವಾಹ್ ನ ಎಸ್ ಡಿಪಿಒ ಬಿರ್ಜೇಶ್ ಶರ್ಮ ತಿಳಿಸಿದ್ದಾರೆ.
ಇದುವರೆಗೆ ಬಸ್ಸಿನ ಚಾಲಕ ಸೇರಿದಂತೆ ಮೂವರು ಗಾಯಗೊಂಡವರನ್ನು ರಕ್ಷಿಸಲಾಗಿದ್ದು ಬ್ಹಡೆರ್ವಾಹ್ ನ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿಮಪಾತದಿಂದ 5 ಶವಗಳನ್ನು ಹೊರತೆಗೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com