ಇಸ್ಲಾಮಾಬಾದ್: ದೇಶದ ಜನತೆಯನ್ನು ಪ್ರಚೋದಿಸಿ ಸೇನೆ ವಿರುದ್ಧ ದ್ವೇಷ ಮೂಡುವಂತೆ ಭಾಷಣ ಮಾಡಿರುವ ಆರೋಪದಡಿಯಲ್ಲಿ ಪಾಕಿಸ್ತಾನ ಪೊಲೀಸರು ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ವರದಿ ದಾಖಲಿಸಿದ್ದಾರೆ.
ರಾವಲ್ಪಿಂಡಿಯ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ವರದಿ ದಾಖಲಾಗಿದ್ದು, ಅಡ್ವೊಕೇಟ್ ಹಾಗೂ ಐಎಂ ಪಾಕಿಸ್ತಾನ ಪಕ್ಷದ ಅಧ್ಯಕ್ಷ ಇಷ್ತಿಕಾ ಅಹ್ಮದ್ ಮಿರ್ಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಂದು ಪುಟದಷ್ಟು ದೂರು ನೀಡಲಾಗಿದ್ದು, ನವಾಜ್ ಷರೀಫ್ ಸೇನೆಯ ವಿರುದ್ಧ ಮಾತನಾಡಿರುವುದಕ್ಕೆ ವಾಟ್ಸ್ ಆಪ್ ವಿಡಿಯೋ ಸಾಕ್ಷಿ ಇದೆ ಎಂದು ಇಷ್ತಿಕಾ ಅಹ್ಮದ್ ಹೇಳಿದ್ದಾರೆ. ನವಾಜ್ ಷರೀಫ್ ತಮ್ಮ ಭಾಷಣದಲ್ಲಿ ಸೇನೆ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.