ಮನಮೋಹನ್ ಆಡಳಿತಾವಧಿಯಲ್ಲಿ ಕಾಶ್ಮೀರದಲ್ಲಿ ಸಹಜ ಸ್ಥಿತಿ, ಉತ್ತುಂಗದಲ್ಲಿ ಪ್ರವಾಸೋದ್ಯಮ: ಕಾಂಗ್ರೆಸ್

ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಮತ್ತೆ ಭುಗಿಲೆದ್ದಿರುವ ಉದ್ವಿಗ್ನ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ...
ಪ್ರಧಾನಿ ನರೇಂದ್ರ ಮೋದಿ-ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್
ಪ್ರಧಾನಿ ನರೇಂದ್ರ ಮೋದಿ-ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಮತ್ತೆ ಭುಗಿಲೆದ್ದಿರುವ ಉದ್ವಿಗ್ನ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿರುವ ಕಾಂಗ್ರೆಸ್, ಪಾಕಿಸ್ತಾನ ಜೊತೆಗಿನ ಭಾರತದ ಸಂಬಂಧ ಹದಗೆಡುತ್ತಿದೆ. ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ಆಡಳಿತದಲ್ಲಿ ಇಷ್ಟೊಂದು ಹಿಂಸಾಚಾರ, ಗಲಭೆ ಕಂಡಿರಲಿಲ್ಲ. ಪ್ರವಾಸೋದ್ಯಮ ಕೂಡ ಪ್ರವರ್ಧಮಾನ ಕಂಡಿತ್ತು ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳು ವಿಫಲವಾಗಿವೆ. ಪಾಕಿಸ್ತಾನ ಜೊತೆ ಸೌಹಾರ್ದ ಸುಧಾರಣೆಯಲ್ಲಿ ಅವರು ಯಾವುದೇ ಮಹತ್ವದ ನೀಲನಕ್ಷೆ ತಯಾರಿಸಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಕಾಶ್ಮೀರ ಕಣಿವೆ ಪರಿಸ್ಥಿತಿ ಸಹಜವಾಗಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದಾರೆ.
ಅನಿಶ್ಚಿತತೆಯಿಂದಾಗಿ ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.
ಕಾಶ್ಮೀರದಲ್ಲಿ ಹಿಂಸೆಯನ್ನು ಹರಡಲು ಪ್ರತ್ಯೇಕತಾವಾದಿ ನಾಯಕರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹಣ ನೀಡುತ್ತಿದೆ ಎಂಬ ವರದಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಇಂತಹ ವಿಷಯಗಳು ಗಂಭೀರವಾಗಿದ್ದು ತನಿಖೆ ನಡೆಸುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ಟೊಮ್ ವಡಕ್ಕನ್ ಹೇಳಿದರು.
ಭಾರತದಲ್ಲಿ ಇತ್ತೀಚೆಗೆ ಇಬ್ಬರು ಐಎಸ್ಐ ಏಜೆಂಟರ್ ಬಂಧಿತರಾದ ನಂತರ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಐಎಸ್ಐಯಿಂದ ಸುಮಾರು 70 ಲಕ್ಷ ಹಣ ಕಳೆದ ಹಲವು ತಿಂಗಳು ಬಂದಿದೆ ಎಂದು ಇತ್ತೀಚೆಗೆ ವರದಿಯೊಂದು ಪ್ರಕಟವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com