ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವಾಸ್ತವ ಸತ್ಯ ಬೇರೆಯೇ ಆಗಿದ್ದು ಅದನ್ನು ಜಗತ್ತಿಗೆ ಸಾರಬೇಕಾಗಿದೆ. ಸತ್ಯವನ್ನು ಅರಿತು ಕಣಿವೆ ರಾಜ್ಯದ ಜನರ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಬೇಕಾಗಿದೆ ಎಂದು ಬಿಜೆಪಿ ನಾಯಕ ಸುದೇಶ್ ವರ್ಮ ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದರು. ಕಾಶ್ಮೀರದಲ್ಲಿ ಸಮಸ್ಯೆಯನ್ನು ಸೃಷ್ಟಿಸುವುದೇ ಪಾಕಿಸ್ತಾನದ ಏಕೈಕ ಉದ್ದೇಶವಾಗಿದ್ದು ಪ್ರತಿಯೊಬ್ಬರಿಗೂ ಅದು ತಿಳಿದಿದೆ ಎಂದರು.