ಪಾಕಿಸ್ತಾನ ತನ್ನ ಕಿರುಕುಳ ನೀಡುವ ವರ್ತನೆ ನಿಲ್ಲಿಸಿಲ್ಲ: ರಾಜನಾಥ್ ಸಿಂಗ್

ಗಡಿ ನಿಯಂತ್ರಣ ರೇಖೆ ಬಳಿ ಇತ್ತೀಚೆಗೆ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯನ್ನು ಗೃಹ ಸಚಿವ...
ಗೃಹ ಸಚಿವ ರಾಜನಾಥ್ ಸಿಂಗ್
ಗೃಹ ಸಚಿವ ರಾಜನಾಥ್ ಸಿಂಗ್
ಕೈತಾಲ್(ಹರ್ಯಾಣ):  ಗಡಿ ನಿಯಂತ್ರಣ ರೇಖೆ ಬಳಿ ಇತ್ತೀಚೆಗೆ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯನ್ನು ಗೃಹ ಸಚಿವ ರಾಜನಾಥ್ ಸಿಂಗ್  ತೀವ್ರವಾಗಿ ಖಂಡಿಸಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಸೌಹಾರ್ದ ಸಂಬಂಧಗಳಿಗೆ ಭಾರತದ ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಅದು ತನ್ನ ನಡೆಯನ್ನು ಬದಲಾಯಿಸಿಲ್ಲ ಎಂದು ಆಪಾದಿಸಿದರು.
ನೆರೆ ರಾಷ್ಟ್ರ ಎಂದು ಪರಿಗಣಿಸಿ ಅದರೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಲು ಹಲವು ಬಾರಿ ಯತ್ನಿಸಿದ್ದೇವೆ. ಆದರೆ ಪಾಕಿಸ್ತಾನ ತನ್ನ ಹಳೆ ಚಾಳಿಯನ್ನು ಬಿಟ್ಟಿಲ್ಲ ಎಂದು ಹೇಳಿದರು.
ಇಂದು ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ನೀಡುತ್ತಿರುವ ಎರಡನೇ ಬಾರಿಯ ಎಚ್ಚರಿಕೆಯಾಗಿದೆ. ಇದಕ್ಕೂ ಮುಂದೆ ರಾಜಸ್ತಾನದ ಪಾಲಿಯಲ್ಲಿ ಇಂದು ಬೆಳಗ್ಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, 2016ರ ಸರ್ಜಿಕಲ್ ಸ್ಟ್ರೈಕ್ ಪಾಕಿಸ್ತಾನಕ್ಕೆ ನೀಡಿದ ದಿಟ್ಟ ಸಂದೇಶವಾಗಿದ್ದು ಅಗತ್ಯಬಿದ್ದರೆ ಭಾರತ ಯಾವಾಗ ಬೇಕಾದರೂ ಗಡಿ ಭಾಗವನ್ನು ಹಾದು ಹೋಗಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com