ಅತ್ಯಾಚಾರಕ್ಕೊಳಗಾದ ಹೆಚ್ ಐವಿ ಪೀಡಿತೆಗೆ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಕಾರ

ಹೆಚ್ಐವಿ ಸೋಂಕಿತ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹೆಚ್ಐವಿ ಸೋಂಕಿತ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಆಕೆಗೆ 3 ಲಕ್ಷ  ರೂಪಾಯಿ ಪರಿಹಾರ ನೀಡುವಂತೆ ಬಿಹಾರ ಸರ್ಕಾರಕ್ಕೆ ಆದೇಶ ಮಾಡಿದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಮಂಡಳಿ ತನ್ನ ವರದಿಯಲ್ಲಿ, ಹೆಚ್ ಐವಿ ಸೋಂಕಿತೆ ಗರ್ಭಪಾತ ಮಾಡಿಸಿಕೊಂಡರೆ ಆಕೆಯ ಜೀವಕ್ಕೆ ಅಪಾಯವಿದೆ ಎಂದು ಹೇಳಿತ್ತು. ಅದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಏಮ್ಸ್ ಗೆ ನಿರ್ದೇಶನ ನೀಡಿ 26 ವಾರಗಳ ಗರ್ಭವತಿಯಾಗಿರುವ ಮಹಿಳೆಯ ಆರೋಗ್ಯವನ್ನು ಪರೀಕ್ಷಿಸುವಂತೆ ಹೇಳಿತ್ತು.
ಮಹಿಳೆ ಪರವಾಗಿ ವಕೀಲೆ ಹಾಗೂ ಕಾರ್ಯತರ್ತೆಯೊಬ್ಬರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಹೆಚ್ ಐವಿ ಪೀಡಿತ ಮಹಿಳೆ ಪಾಟ್ನಾದಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭವತಿಯಾಗಿದ್ದಳು.
ಗರ್ಭಪಾತ ಮಾಡಿಸಿಕೊಳ್ಳಲು ಈ ಹಿಂದೆ ಪಾಟ್ನಾ ಹೈಕೋರ್ಟ್ ಕೂಡ ನಿರಾಕರಿಸಿತ್ತು. ಮಹಿಳೆ ಗರ್ಭ ಧರಿಸಿ 20 ವಾರಗಳಾಗಿದ್ದು ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್ 1971ರ ಪ್ರಕಾರ ಕಾನೂನಿಗೆ ವಿರುದ್ಧ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೆ ಗರ್ಭ ಧರಿಸಿ 17 ವಾರಗಳಾಗುವಾಗ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರವನ್ನು ಕೂಡ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com