ಕುಲಾಂತರಿ ಆಹಾರ ಉತ್ಪನ್ನಗಳಿಗೆ ನಿಯಮ ವಿಧಿಸಲು ಸಭೆ ಕರೆದ ಕೇಂದ್ರ ಸರ್ಕಾರ

ಸಂಸ್ಕರಿಸಿದ ಕುಲಾಂತರಿ ಆಹಾರ ಉತ್ಪನ್ನಗಳ ಆಮದಿನ ಮೇಲೆ ಯಾವುದೇ ನಿಯಂತ್ರಣ ಇಲ್ಲದೇ ಇರುವ ಹಿನ್ನೆಲೆಯಲ್ಲಿ ನಿಯಮ-ನಿಯಂತ್ರಣಗಳನ್ನು ರೂಪಿಸುವ ಸಂಬಂಧ ಚರ್ಚಿಸಲು ಕೇಂದ್ರ ಸರ್ಕಾರ ಸಭೆ ಕರೆದಿದೆ.
ಕುಲಾಂತರಿ ಆಹಾರ ಉತ್ಪನ್ನ
ಕುಲಾಂತರಿ ಆಹಾರ ಉತ್ಪನ್ನ
ನವದೆಹಲಿ: ಸಂಸ್ಕರಿಸಿದ ಕುಲಾಂತರಿ ಆಹಾರ ಉತ್ಪನ್ನಗಳ ಆಮದಿನ ಮೇಲೆ ಯಾವುದೇ ನಿಯಂತ್ರಣ ಇಲ್ಲದೇ ಇರುವ ಹಿನ್ನೆಲೆಯಲ್ಲಿ ನಿಯಮ-ನಿಯಂತ್ರಣಗಳನ್ನು ರೂಪಿಸುವ ಸಂಬಂಧ ಚರ್ಚಿಸಲು ಕೇಂದ್ರ ಸರ್ಕಾರ ಸಭೆ ಕರೆದಿದೆ. 
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಲಾಂತರಿ ಆಹಾರ ಉತ್ಪನ್ನಗಳಿಗೆ ನಿಯಮ ವಿಧಿಸುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಕೇಂದ್ರ ಸರ್ಕಾರ ಸಭೆ ನಡೆಸುವುದಕ್ಕೂ ಮುನ್ನ ಜೆನೆಟಿಕ್ ಎಂಜಿನಿಯರಿಂಗ್ ಅಪ್ರೇಸಲ್ ಸಮಿತಿ (ಜಿಇಎಸಿ) ನಡೆಸಿದ್ದ ಸಭೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರದೊಂದಿಗೆ ಸಭೆ ನಡೆಸಿ ಸಂಸ್ಕರಿತ ಕುಲಾಂತರಿ ಆಹಾರಗಳಿಗೆ ಸಂಬಂಧಿಸಿದಂತೆ ನಿಯಂತ್ರಣ-ನಿಯಮಗಳನ್ನು ರೂಪಿಸಬೇಕು ಎಂಬ ಸಲಹೆ ನೀಡಿತ್ತು. ಅದರಂತೆಯೇ ಈಗ ಕೇಂದ್ರ ಸರ್ಕಾರ ಸಭೆ ಕರೆದಿದ್ದು ಜಿಎಂ ಆಹಾರಗಳಿಗೆ ಶೀಘ್ರವೇ ನಿಯಂತ್ರಣ-ನಿಯಮಗಳು ರೂಪುಗೊಳ್ಳಲಿವೆ. 
ಭಾರತದಲ್ಲಿ ಈಗ ಸಂಸ್ಕರಿಸಿದ ಕುಲಾಂತರಿ ಆಹಾರದ ಕೊರತೆ ಇದ್ದು, ಎಫ್ಎಸ್ಎಸ್ಎಐ ನಿಯಂತ್ರಣಗಳನ್ನು ರೂಪಿಸುವವರೆಗೆ ಸಂಸ್ಕರಿಸಿದ ಕುಲಾಂತರಿ ಆಹಾರಗಳ ಆಮದು ಬಗ್ಗೆ ಜಿಇಎಸಿ ಗಮನ ಹರಿಸಬೇಕೆಂದು ಸಮಿತಿ ನಿರ್ಧರಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com