ನೋಟು ನಿಷೇಧದ ಪ್ರಕ್ರಿಯೆ ಬಹಿರಂಗಪಡಿಸಿದರೆ ದೇಶದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ: ಆರ್ ಬಿಐ

ಪ್ರಧಾನ ಮಂತ್ರಿಯವರು ನೋಟು ಅಮಾನ್ಯತೆಗೆ ಆದೇಶ ನೀಡಿ 6 ತಿಂಗಳು ಕಳೆದಿದ್ದು ನೋಟು ನಿಷೇಧದ ಪ್ರಕ್ರಿಯೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಧಾನ ಮಂತ್ರಿಯವರು ನೋಟು ಅಮಾನ್ಯತೆಗೆ ಆದೇಶ ನೀಡಿ 6 ತಿಂಗಳು ಕಳೆದಿದ್ದು ನೋಟು ನಿಷೇಧದ ಪ್ರಕ್ರಿಯೆಯನ್ನು ಬಹಿರಂಗಪಡಿಸಲು ನಿರಾಕರಿಸಿದೆ. ದೇಶದ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಅದು ಹೇಳಿದೆ.
ನೋಟು ನಿಷೇಧದ ಪ್ರಕ್ರಿಯೆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಿಸರ್ವ್ ಬ್ಯಾಂಕ್ ಇಂತಹ ಮಾಹಿತಿಗಳನ್ನು ಬಹಿರಂಗಪಡಿಸುವುದರಿಂದ ಭಾರತ ಸರ್ಕಾರದ ಭವಿಷ್ಯದ ಆರ್ಥಿಕ ಅಥವಾ ಹಣಕಾಸಿನ ನೀತಿಗಳಿಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿದೆ.
ಹಳೆಯ 500 ಮತ್ತು 1000ದ ನೋಟುಗಳ ಚಲಾವಣೆಯನ್ನು ರದ್ದುಪಡಿಸಲು ತನ್ನ ಕಚೇರಿಯಲ್ಲಿ ನಡೆಸಿದ ಸಭೆಗಳು, ನಡೆಸಲಾದ ಚರ್ಚೆಗಳ ಕುರಿತ ಪ್ರತಿಯೊಂದನ್ನು ನೀಡುವಂತೆ ಮತ್ತು ಪ್ರಧಾನಿ ಕಾರ್ಯಾಲಯ ಹಾಗೂ ಹಣಕಾಸು ಸಚಿವಾಲಯ ಜೊತೆ ನೋಟುಗಳ ಅಮಾನ್ಯತೆ ವಿಷಯವಾಗಿ ಮಾಹಿತಿ ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕೋರಲಾಗಿತ್ತು.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ವಿಷಯಗಳು ಬಹಳ ಸೂಕ್ಷ್ಮವಾಗಿದೆ. ನೋಟುಗಳ ಚಲಾವಣೆಗೆ ಮುನ್ನ ನಡೆಸಲಾದ ಚರ್ಚೆ, ಅಭಿಪ್ರಾಯ, ಅಂಕಿಅಂಶ, ಅಧ್ಯಯನ ಮತ್ತು ಸಮೀಕ್ಷೆಗಳ ಕುರಿತು ಕೇಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com