ಜಾಕಿರ್ ನಾಯ್ಕ್ ನ ಐಆರ್ ಎಫ್ ಸಂಸ್ಥೆಗೆ ನಿಷೇಧ ದೇಶದ ಹಿತಾಸಕ್ತಿಗೆ ಪೂರಕ: ನ್ಯಾಯಮಂಡಳಿ

ಇಸ್ಲಾಂ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಐಆರ್ ಎಫ್ ಸಂಸ್ಥೆಗೆ ನಿಷೇಧ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿಶೇಷ ನ್ಯಾಯಮಂಡಳಿ ಎತ್ತಿ ಹಿಡಿದಿದೆ.
ಜಾಕಿರ್ ನಾಯ್ಕ್
ಜಾಕಿರ್ ನಾಯ್ಕ್
ನವದೆಹಲಿ: ಇಸ್ಲಾಂ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ನ ಐಆರ್ ಎಫ್ ಸಂಸ್ಥೆಗೆ ನಿಷೇಧ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿಶೇಷ ನ್ಯಾಯಮಂಡಳಿ ಎತ್ತಿ ಹಿಡಿದಿದೆ. 
ದೇಶದ ಹಿತಾಸಕ್ತಿ ದೃಷ್ಟಿಯಿಂದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಗೆ ನಿಷೇಧ ವಿಧಿಸಿರುವ ಕ್ರಮ ಸರಿಯಾಗಿದೆ ಎಂದು ನ್ಯಾ. ಸಂಗೀತಾ ಧೀಂಗ್ರ ಅವರಿದ್ದ ದೆಹಲಿ ಹೈಕೋರ್ಟ್ ನ ವಿಶೇಷ ನ್ಯಾಯಪೀಠ ಹೇಳಿದೆ. ಐಆರ್ ಎಫ್ ನಿಂದ ದೇಶದ ಭದ್ರತೆ, ಸಮಗ್ರತೆಗೆ ಧಕ್ಕೆ ಉಂಟಾಗುವ ಅಪಾಯ ಸೇರಿದಂತೆ ಹಲವು ಕಾರಣಗಳಿದ್ದು, ಐಆರ್ ಎಫ್ ನ್ನು ಅಕ್ರಮ ಸಂಘಟನೆ ಎಂದು ಘೋಷಿಸುವುದಕ್ಕೆ ಸೂಕ್ತ ಕಾರಣಗಳಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 
2016  ರ ನವೆಂಬರ್ 17 ರಂದು ಕೇಂದ್ರ ಸರ್ಕಾರ ಐಆರ್ ಎಫ್ ವಿರುದ್ಧ 5 ವರ್ಷಗಳ ನಿಷೇಧ ವಿಧಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಪೀಠ, ಐಆರ್ ಎಫ್ ಭಾರತದ ಅಸ್ಮಿತೆಗೆ ಧಕ್ಕೆ ಉಂಟು ಮಾಡುತ್ತಿತ್ತು ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಐಆರ್ ಎಫ್ ನ ನಿಷೇಧಕ್ಕೆ ನೀಡಿರುವ ಕಾರಣಗಳು 1967 ರ ಯುಎಪಿಎ ಕಾಯ್ದೆಯ ಅಂಶಗಳಿಗೆ ಪೂರಕವಾಗಿರುವುದರಿಂದ ಸರ್ಕಾರದ ಕ್ರಮ ಸರಿ ಇದೆ ಎಂದು ನ್ಯಾಯಮಂಡಳಿ ಹೇಳಿದೆ.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com