ಉಪ ಪ್ರಾಂಶಪಾಲರಿಂದ ಥಳಿತ: ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ

ಉಪ ಪ್ರಾಂಶಪಾಲನೊಬ್ಬ ವಿದ್ಯಾರ್ಥಿಗೆ ನೀಡಿದ ಶಿಕ್ಷೆಯಿಂದಾಗಿ ಬಾಲಕ ದೃಷ್ಟಿ ಕಳೆದುಕೊಂಡಿರುವ ಘಟನೆ ಅಲಹಾಬಾದ್ ನ ಸೇಂಟ್ ಜೋಸೆಫ್ ಶಾಲೆಯಲ್ಲಿ ..
ದೃಷ್ಟಿ ಕಳೆದುಕೊಂಡ ಬಾಲಕ
ದೃಷ್ಟಿ ಕಳೆದುಕೊಂಡ ಬಾಲಕ
ಅಲಹಾಬಾದ್: ಉಪ ಪ್ರಾಂಶಪಾಲನೊಬ್ಬ ವಿದ್ಯಾರ್ಥಿಗೆ ನೀಡಿದ ಶಿಕ್ಷೆಯಿಂದಾಗಿ ಬಾಲಕ ದೃಷ್ಟಿ ಕಳೆದುಕೊಂಡಿರುವ ಘಟನೆ ಅಲಹಾಬಾದ್ ನ ಸೇಂಟ್ ಜೋಸೆಫ್ ಶಾಲೆಯಲ್ಲಿ ನಡೆದಿದೆ.
ಸರ್ವನ್ ಟೆರೆನ್ಸ್ ಎಂಬ ವಿದ್ಯಾರ್ಥಿ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಬೆಳಗ್ಗಿನ ಅಸೆಂಬ್ಲಿ ವೇಳೆ ಶಾಲಾ ಬ್ಯಾಗ್ ಅನ್ನು ಹಾಕಿಕೊಂಡು ನಿಂತಿದ್ದಕ್ಕೆ ಉಪ ಪ್ರಾಂಶುಪಾಲ ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ್ದಾರೆ.
ಅಲಹಾಬಾದ್ ನಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಲಕ್ನೋಗೆ ಶಿಫ್ಟ್ ಮಾಡಿಸಲಾಗಿದೆ. ಬಾಲಕನ ಕುಟುಂಬಸ್ಥರು ಉಪ ಪ್ರಾಂಶುಪಾಲರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಮೇ9 ರಂದು ಬೆಳಗ್ಗೆ ಟೆರೆನ್ಸ್ ಶಾಲೆಗೆ ತೆರಳಿದ್ದ, ಈ ವೇಳೆ ಬಾಲಕ ಅಸೆಂಬ್ಲಿಯಲ್ಲಿ ಸ್ಕೂಲ್ ಬ್ಯಾಗ್ ಹಾಕಿಕೊಂಡು ನಿಂತಿದ್ದನ್ನು ನೋಡಿದ್ದ ಲೆಸ್ಲಿ ಕೊಟಿನೋ ಬೆತ್ತದಿಂದ ಥಳಿಸಿದ್ದಾನೆ. ಈ ವೇಳೆ ಟೆರೆನ್ಸ್ ನ ಬಲಗಣ್ಣಿಗೆ ಏಟು ಬಿದ್ದಿದೆ. ಅದರಿಂದ ರಕ್ತಸ್ರಾವವಾಗುತ್ತಿತ್ತು.
ಕೂಡಲೇ ಆತನನ್ನು ಅಲಹಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಲಕ್ನೋಗೆ ಶಿಫ್ಟ್ ಮಾಡಲಾಗಿದೆ. ಕಣ್ಣಿನಿಂದ ರಕ್ತಸ್ರಾವವಾಗುತ್ತಿದ್ದರಿಂದ ವಿದ್ಯಾರ್ಥಿ ದೃಷ್ಟಿ ಕಳೆದುಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com