ಗಿನ್ನೀಸ್ ದಾಖಲೆಯ ಪುಟ ಸೇರಿದ 112 ಅಡಿ ಆದಿ ಯೋಗಿ ಶಿವನ ವಿಗ್ರಹ

ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹ ಗಿನ್ನೀಸ್ ವಿಶ್ವದಾಖಲೆಯ ಪುಟ ಸೇರಿದೆ.
ಆದಿಯೋಗಿ ವಿಗ್ರಹ
ಆದಿಯೋಗಿ ವಿಗ್ರಹ
ಕೊಯಂಬತ್ತೂರು: ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹ ಗಿನ್ನೀಸ್ ವಿಶ್ವದಾಖಲೆಯ ಪುಟ ಸೇರಿದೆ. 
ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ಆದಿ ಯೋಗಿಯ ವಿಗ್ರವನ್ನು ಸಂಪೂರ್ಣ ಉಕ್ಕಿನಿಂದ ನಿರ್ಮಿಸಲಾಗಿದ್ದು, ಫೆ.24 ರಂದು ಮಹಾಶಿವರಾತ್ರಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಆದಿ ಯೋಗಿಯ ವಿಗ್ರಹವನ್ನು ಉದ್ಘಾಟಿಸಿದ್ದರು. 
ಆದಿ ಯೋಗಿಯ ವಿಗ್ರಹ ಗಿನ್ನೀಸ್ ದಾಖಲೆಯ ಪುಟ ಸೇರಿರುವುದರ ಬಗ್ಗೆ ಈಶ ಫೌಂಡೇಷನ್ ನ ಪ್ರತಿನಿಧಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಆಡಿ ಯೋಗಿ ಯೋಗದ ಮೂಲವಾಗಿದ್ದು, ಜನರಿಗೆ ಆದಿಯೋಗಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಿರ್ಮಾಣಗೊಂಡಿದ್ದಾಗಿದೆ, ಆದಿಯೋಗಿ ವಿಗ್ರಹ ವಿನ್ಯಾಸವನ್ನು ರಚಿಸುವುದಕ್ಕೆ 30 ತಿಂಗಳ ಕಾಲಾವಕಾಶ ತೆಗೆದುಕೊಂಡಿತ್ತು. ಹಾಗೂ ಅದನ್ನು ನಿರ್ಮಿಸಲು 8 ತಿಂಗಳು ಬೇಕಾಯಿತು ಎಂದಿದ್ದಾರೆ. ಈಶ ಫೌಂಡೇಷನ್ ನಿರ್ಮಿಸಿರುವ ಆದಿ ಯೋಗಿಯ ವಿಗ್ರಹವಿರುವ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com