ವಿದೇಶಕ್ಕೆ ತೆರಳುವ ಉದ್ಯೋಗಿಗಳ ಜೀವ ವಿಮೆ ಸ್ವಾಭಾವಿಕ ಸಾವಿಗೂ ಅನ್ವಯಿಸಲು ಕೇಂದ್ರದ ಚಿಂತನೆ

ವಿದೇಶಕ್ಕೆ ತೆರಳುವ ಭಾರತೀಯ ನೌಕರರ ಜೀವ ವಿಮೆಯನ್ನು ಅಪಘಾತದಿಂದ ಉಂಟಾಗುವ ಸಾವಿಗೆ ಮಾತ್ರವಲ್ಲದೇ ಸ್ವಾಭಾವಿಕ ಸಾವಿಗೂ ಅನ್ವಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಕೇಂದ್ರ ಸಚಿವ ವಿಕೆ ಸಿಂಗ್
ಕೇಂದ್ರ ಸಚಿವ ವಿಕೆ ಸಿಂಗ್
ಹೈದರಾಬಾದ್: ವಿದೇಶಕ್ಕೆ ತೆರಳುವ ಭಾರತೀಯ ನೌಕರರ ಜೀವ ವಿಮೆಯನ್ನು ಅಪಘಾತದಿಂದ ಉಂಟಾಗುವ ಸಾವಿಗೆ ಮಾತ್ರವಲ್ಲದೇ ಸ್ವಾಭಾವಿಕ ಸಾವಿಗೂ ಅನ್ವಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 
ವಿದೇಶದಲ್ಲಿರುವ ಭಾರತೀಯ ನೌಕರರಿಗೆ ಪ್ರವಾಸಿ ಭಾರತೀಯ ಭೀಮಾ ಯೋಜನೆಯನ್ನು ಹೊಂದಿದ್ದೇವೆ. ಈ ಯೋಜನೆಯ ಅಡಿಯಲ್ಲಿ ಕೇವಲ ಅಪಘಾತದ ಸಂದರ್ಭದಲ್ಲಿ ಮೃತ್ಯು ಸಂಭವಿಸಿದರೆ ಮಾತ್ರ ವಿಮೆಯ ಹಣ ಬರುತ್ತದೆ. ಆದರೆ ಇದೇ ವಿಮೆಯನ್ನು ಸಹಜ ಮೃತ್ಯುವಿಗೂ ಅನ್ವಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ. 
ಸಹಜ ಮೃತ್ಯುವಿಗೂ ಪ್ರವಾಸಿ ಭಾರತೀಯ ಭೀಮಾ ಯೋಜನೆಯ ವಿಮೆಯನ್ನು ಅನ್ವಯಿಸಿದರೆ ಕುಟುಂಬ ಸದಸ್ಯರಿಗೆ ನೆರವಾಗಲಿದೆ. ಪ್ರಸ್ತುತ ಇರುವ ವಿಮೆಯ ನಿಯಮಗಳ ಪ್ರಕಾರ ಎಲ್ಐಸಿಯನ್ನು ಹೊರತುಪಡಿಸಿ ಬೇರೆ ಯಾವುದೂ ಸಹ ಸ್ವಾಭಾವಿಕ ಮೃತ್ಯುವಿಗೆ ವಿಮೆ ನೀಡುವುದಿಲ್ಲ. ಇದನ್ನು ನಾವು ಬದಲಾಯಿಸಲು ಹಾಗೂ ಹೊಸ ವಿಧಾನಗಳನ್ನು ಪರಿಚಯಿಸಿ ಸ್ವಾಭಾವಿಕ ಮೃತ್ಯುವಿಗೂ ವಿಮೆ ನೀಡಲು ತೀರ್ಮಾನಿಸಿದ್ದೇವೆ ಎಂದು ವಿಕೆ ಸಿಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com