ಕಲ್ಲು ತೂರಿದ ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ ಸೇನಾಧಿಕಾರಿಗೆ ಕ್ಲೀನ್ ಚಿಟ್

ಸೇನಾ ಸಿಬ್ಬಂದಿ ಮೇಲಿನ ಕಲ್ಲು ತೂರಾಟವನ್ನು ತಡೆಯುವುದಕ್ಕಾಗಿ ಕಲ್ಲು ತೂರಿದ ಯುವಕನೊಬ್ಬನನ್ನು ಜೀಪ್ ಕಟ್ಟಿ ಮೆರವಣಿಗೆ....
ಜೀಪ್'ಗೆ ಕಟ್ಟಿ ಕಲ್ಲುತೂರಾಟಗಾರನ ಮೆರವಣಿಗೆ
ಜೀಪ್'ಗೆ ಕಟ್ಟಿ ಕಲ್ಲುತೂರಾಟಗಾರನ ಮೆರವಣಿಗೆ
ಶ್ರೀನಗರ: ಸೇನಾ ಸಿಬ್ಬಂದಿ ಮೇಲಿನ ಕಲ್ಲು ತೂರಾಟವನ್ನು ತಡೆಯುವುದಕ್ಕಾಗಿ ಕಲ್ಲು ತೂರಿದ ಯುವಕನೊಬ್ಬನನ್ನು ಜೀಪ್ ಕಟ್ಟಿ ಮೆರವಣಿಗೆ ಮಾಡಿದ್ದ ಸೇನಾ ಅಧಿಕಾರಿಗೆ ಸೇನಾ ಕೋರ್ಟ್ ಸೋಮವಾರ ಕ್ಲೀನ್ ಚಿಟ್ ನೀಡಿದೆ. ಅಲ್ಲದೆ ಅಧಿಕಾರಿಯ ಶ್ಲಾಘಿಸಿದೆ.
ಕಳೆದ ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುವವರನ್ನು ನಿಗ್ರಹಿಸುವ ಭಾಗವಾಗಿ ಕಲ್ಲು ತೂರಾಟ ನಡೆಸುವವರನ್ನೇ ಭಾರತೀಯ ಸೇನಾ ಸಿಬ್ಬಂದಿಗಳು ಜೀಪ್ ಗೆ ಬಿಗಿದು ಚಾಲನೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ, ಸಾಕಷ್ಟು ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿತ್ತು. 
ಈ ಕುರಿತು ಸೇನೆ ತನಿಖೆಗೆ ಆದೇಶಿಸಿತ್ತು. ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದ ಸೇನಾ ಮೇಜರ್ ನಿತಿನ್ ಗೊಗೊಲ್ ಅವರ ವಿರುದ್ಧ ಪೊಲೀಸರ ಎಫ್ಐಆರ್ ಸಹ ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಸೇನಾ ಕೋರ್ಟ್, ಮೇಜರ್ ನಿತಿನ್ ಗೊಗೊಲ್ ಅವರಿಗೆ ಕ್ಲೀನ್ ಚಿಟ್ ನೀಡಿ ಅವರ ಕ್ರಮವನ್ನು ಶ್ಲಾಘಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com