ರಾನ್ಸಮ್ ವೇರ್ ಸೈಬರ್ ದಾಳಿಗೆ ತೆತ್ತ ಬೆಲೆ $70,000: ಶ್ವೇತ ಭವನ

ವಿಶ್ವಾದ್ಯಂತ ಸಂಚಲನ ಮೂಡಿಸಿದ್ದ ರಾನ್ಸಮ್ ವೇರ್ ಸೈಬರ್ ದಾಳಿಗೆ ಸುಮಾರು $70,000 ಕ್ಕಿಂತ ಸ್ವಲ್ಪ ಕಡಿಮೆ ಮೊತ್ತವನ್ನು ತೆತ್ತಲಾಗಿದೆ ಎಂದು ಶ್ವೇತ ಭವನ ಹೇಳಿದೆ.
ರಾನ್ಸಮ್ ವೇರ್ ಸೈಬರ್ ದಾಳಿ
ರಾನ್ಸಮ್ ವೇರ್ ಸೈಬರ್ ದಾಳಿ
ವಾಷಿಂಗ್ ಟನ್: ವಿಶ್ವಾದ್ಯಂತ ಸಂಚಲನ ಮೂಡಿಸಿದ್ದ ರಾನ್ಸಮ್ ವೇರ್ ಸೈಬರ್ ದಾಳಿಗೆ ಸುಮಾರು $70,000 ಕ್ಕಿಂತ ಸ್ವಲ್ಪ ಕಡಿಮೆ ಮೊತ್ತವನ್ನು ತೆತ್ತಲಾಗಿದೆ ಎಂದು ಶ್ವೇತ ಭವನ ಹೇಳಿದೆ. 
150 ರಾಷ್ಟ್ರಗಳು ರಾನ್ಸಮ್ ವೇರ್ ಸೈಬರ್ ದಾಳಿಗೊಳಗಾಗಿದ್ದು, ರಾನ್ಸಮ್ ವೇರ್ ದಾಳಿಗೆ ಈ ವರೆಗೂ $70,000 ಬೆಲೆ ತೆರಲಾಗಿದೆ. ಆದರೆ ಪಾವತಿಯಾದ ನಂತರ ಡಾಟಾ ರಿಕವರಿಯಾದ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಶ್ವೇತ ಭವನದ ಗೃಹ ಖಾತೆ ಸಲಹೆಗಾರ ಟಾಮ್ ಬಾಸ್ಸೆರ್ಟ್ ಹೇಳಿದ್ದಾರೆ.
ವನ್ನಾ ಕ್ರೈ, ವನ್ನಾ ಕ್ರಿಪ್ಟ್ ಎಂಬ ವೈರಸ್ ಮೂಲಕ ನಡೆಸಲಾದ ರಾನ್ಸಮ್ ವೇರ್ ಸೈಬರ್ ದಾಳಿಯಿಂದ 150 ರಾಷ್ಟ್ರಗಳಲ್ಲಿ 30,000 ಕಂಪ್ಯೂಟರ್ ಗಳ ಡಾಟಾ ಲಾಕ್ ಆಗಿತ್ತು. ಆದರೆ ವಾರಾಂತ್ಯದ ವೇಳೆಗೆ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ ಎಂದು ಟಾಮ್ ಬಾಸ್ಸೆರ್ಟ್ ತಿಳಿಸಿದ್ದಾರೆ. 
ಅಮೆರಿಕಾದ ಸಂಸ್ಥೆಯೇ ತಯಾರಿಸಲಾಗಿದ್ದ ವೈರಸ್ ನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿ, ಬೇರೆ ರಾಷ್ಟ್ರಗಳಲ್ಲಿನ ಕಂಪ್ಯೂಟರ್ ಗೆ ವೈರಸ್ ನ್ನು ಕಳಿಸಿದ್ದರೂ ಸಹ ಟಾಮ್ ಬಾಸ್ಸೆರ್ಟ್ ಪ್ರಕಾರ ಅಮೆರಿಕಾದ ಫೆಡರಲ್ ಸಿಸ್ಟಮ್ ಗಳಿಗೆ ಕಿಂಚಿತ್ತೂ ಹಾನಿ ಉಂಟಾಗಿಲ್ಲವಂತೆ. ಮೂರು ಭಿನ್ನ ಮಾದರಿಯ ರಾನ್ಸಮ್ ವೇರ್ ದಾಳಿಗಳಿದ್ದು  ಕಂಪ್ಯೂಟರ್ ಗಳ ಪ್ಯಾಚಿಂಗ್ ವ್ಯವಸ್ಥೆಯಿಂದ ಮೂರು ವಿಧದ ದಾಳಿಗಳನ್ನು ಎದುರಿಸಬಹುದು ಎಂದು ಬಾಸ್ಸೆರ್ಟ್ ಮಾಹಿತಿ ನೀಡಿದ್ದಾರೆ. 
ಅಮೆರಿಕಾದ ಹೋಮ್ ಲ್ಯಾಂಡ್ ಸಲಹೆಗಾರ ಹೇಳಿಕೆ ನೀಡುವುದಕ್ಕೂ ಮುನ್ನ ರಾನ್ಸಮ್ ವೇರ್ ದಾಳಿಗೆ ಅಮೆರಿಕಾ ಸರ್ಕಾರದ ವಿರುದ್ಧವೇ ಕಿಡಿ ಕಾರಿದ್ದ ಮೈಕ್ರೋಸಾಫ್ಟ್, " ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ಎ) ರಾನ್ಸಮ್ ವೇರ್ ದಾಳಿಗೆ ಬಳಸಿಕೊಳ್ಳಲಾದ ವೈರಸ್ ನ್ನು ಮೊದಲು ಕಂಡು ಹಿಡಿದಿದ್ದೇ ಅಮೆರಿಕಾ, ಆದರೆ ಆ ವೈರಸ್ ನ್ನು ಹ್ಯಾಕರ್ ಗಳು ಹ್ಯಾಕ್ ಮಾಡುವವರೆಗೂ ಅಮೆರಿಕಾ ಮೌನವಾಗಿತ್ತು" ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ರಾನ್ಸಮ್ ವೇರ್ ಟೂಲ್ ನ್ನು ಎನ್ಎಸ್ಎ ಅಭಿವೃದ್ಧಿ ಪಡಿಸಿದೆ ಎಂಬುದನ್ನು ಬಾಸ್ಸೆರ್ಟ್ ನಿರಾಕರಿಸಿದ್ದಾರೆ. ಒಟ್ಟಾರೆ ಅಮೆರಿಕಾದ ನಿರ್ಲಕ್ಷ್ಯಕ್ಕೆ ಜಗತ್ತು ಈಗಿನ ವರೆಗೂ $70,000 ಬೆಲೆ ತೆರಬೇಕಾಗಿ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com