ತಿಹಾರ್ ಜೈಲಿನಲ್ಲಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಪಾಸಾದ 82 ವರ್ಷದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ

ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ತಮ್ಮ 82ನೇ ವಯಸ್ಸಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು...
ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ
ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ
ಚಂಡೀಗಢ: ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ತಮ್ಮ 82ನೇ ವಯಸ್ಸಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ.  ಅದು ಕೂಡ ತಿಹಾರ್ ಜೈಲಿನಲ್ಲಿ 10 ವರ್ಷ ಸೆರೆವಾಸ ಅನುಭವಿಸುತ್ತಿರುವಾಗ.
ಶಿಕ್ಷಕರ ನೇಮಕಾತಿ ಹಗರಣ ಕೇಸಿನಲ್ಲಿ ಚೌಟಾಲಾ ಶಿಕ್ಷೆಗೊಳಗಾಗಿ ತಿಹಾರ್ ಜೈಲು ಸೇರಿದ್ದಾರೆ. ಅಲ್ಲಿದ್ದುಕೊಂಡು ಪರೀಕ್ಷೆ ಬರೆದು ಉತ್ತೀರ್ಣರಾದ ಚೌಟಾಲಾ ಇನ್ನು ಮುಂದೆ ಬಿ.ಎ ಪದವಿ ಮಾಡುವ ಯೋಚನೆಯಲ್ಲಿದ್ದಾರೆ ಎಂದು ಅವರ ಪುತ್ರ ಐಎನ್ಎಲ್ ಡಿ ನಾಯಕ ಅಭಯ್ ಸಿಂಗ್ ಚೌಟಾಲಾ ತಿಳಿಸಿದ್ದಾರೆ.
ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ ನಡೆಸಿದ 12ನೇ ತರಗತಿ ಪರೀಕ್ಷೆಯನ್ನು ಜೈಲಿನಲ್ಲಿದ್ದುಕೊಂಡೇ ಬರೆದಿದ್ದಾರೆ. ಜೈಲಿನಲ್ಲಿಯೇ ಪರೀಕ್ಷಾ ಕೇಂದ್ರವೊಂದನ್ನು ಕೈದಿಗಳಿಗೆ ತೆರೆಯಲಾಗಿತ್ತು.   ಕೊನೆಯ ಪರೀಕ್ಷೆ ಏಪ್ರಿಲ್ 23ರಂದು ನಡೆಯಿತು ಎಂದು ಅವರ ಪುತ್ರ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಚೌಟಾಲಾ ಕಳೆದ ತಿಂಗಳು ತಮ್ಮ ಮೊಮ್ಮಗ ಹಾಗೂ ಹಿಸಾರ್ ಕ್ಷೇತ್ರದ ಸಂಸದ ದುಶ್ಯಂತ್ ಸಿಂಗ್ ಚೌಟಾಲಾ ಅವರ ಮದುವೆಗೆಂದು ಪರೊಲ್ ಮೇಲೆ ಹೊರಬಂದಿದ್ದರು. ಮೇ 5ಕ್ಕೆ ಪರೊಲ್ ಕೊನೆಯಾಗಿತ್ತು.
ಕಳೆದ ನಾಲ್ಕೂವರೆ ವರ್ಷದಿಂದ ನಮ್ಮ ತಂದೆ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ತಂದೆ ಯೋಚಿಸುತ್ತಿದ್ದರು. ಅವರು ಪರೀಕ್ಷೆಯನ್ನು ಮೊದಲ ಶ್ರೇಣಿಯಲ್ಲಿ ತೇರ್ಗಡೆ ಮಾಡಿಕೊಂಡಿದ್ದಾರೆ ಎಂದು ಅಭಯ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com