ನೋಟು ರದ್ದತಿ ನಂತರ ತೆರಿಗೆದಾರರ ಸಂಖ್ಯೆ 91 ಲಕ್ಷಕ್ಕೆ ಏರಿಕೆ: ಜೇಟ್ಲಿ

500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ದೇಶದಲ್ಲಿ ತೆರಿಗೆದಾರರ ಸಂಖ್ಯೆ ಹೆಚ್ಚಿದ್ದು, 91 ಲಕ್ಷೆಕ್ಕೆ ಏರಿಕೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ತೆರಿಗೆದಾರರ ಸಂಖ್ಯೆ 91 ಲಕ್ಷಕ್ಕೆ ಏರಿಕೆ
ತೆರಿಗೆದಾರರ ಸಂಖ್ಯೆ 91 ಲಕ್ಷಕ್ಕೆ ಏರಿಕೆ
ನವದೆಹಲಿ: 500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ದೇಶದಲ್ಲಿ ತೆರಿಗೆದಾರರ ಸಂಖ್ಯೆ ಹೆಚ್ಚಿದ್ದು, 91 ಲಕ್ಷೆಕ್ಕೆ ಏರಿಕೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ನೋಟು ನಿಷೇಧದಿಂದ ಉಂಟಾಗಿರುವ ಪ್ರಯೋಜನಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಜೆಟ್ಲಿ, ದಿನನಿತ್ಯದ ಪ್ಯಾನ್ ನಂಬರ್ ಗಳ ಹಂಚಿಕೆ 2-3 ಲಕ್ಷಕ್ಕೆ ಏರಿಕೆಯಾಗಿದೆ. ಇದು ನೋಟು ನಿಷೇಧಕ್ಕೂ ಮುನ್ನ ಕೇವಲ ಒಂದು ಲಕ್ಷವಿತ್ತೆಂದು ಮಾಹಿತಿ ನೀಡಿದ್ದಾರೆ. 
ತೆರಿಗೆ ಪಾವತಿ ಮಾಡದೇ ಇರುವವರನ್ನು ಗುರುತಿಸಿ ಪಟ್ಟಿ ಮಾಡುವುದಕ್ಕೆ ಇದು ಸೂಕ್ತ ಸಮಯವಾಗಿದ್ದು, ತೆರಿಗೆ ಪಾವತಿ ಮಾಡುವಂತೆ ಮಾಡುವುದಕ್ಕೆ ಇದು ಸೂಕ್ತ ಸಮಯ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಆಪರೇಷನ್ ಕ್ಲೀನ್ ಮನಿ ಎಂಬ ಹೆಸರಿನ ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡಿರುವ ಅರುಣ್ ಜೇಟ್ಲಿ, ತೆರಿಗೆದಾರರಲ್ಲದ ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಮೊತ್ತ ಜಮಾ ಆಗಿರುವುದನ್ನು ಪತ್ತೆ ಮಾಡಲಾಗಿದ್ದು, ಡಾಟಾ ಮೈನಿಂಗ್ ಮೂಲಕ ಈ ರೀತಿಯ ಒಟ್ಟು 18 ಲಕ್ಷ ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನೋಟು ನಿಷೇಧದ ನಂತರ ವೈಯಕ್ತಿಕ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಹೊಸ ವೆಬ್ ಸೈಟ್ ಪ್ರಮಾಣಿಕ ತೆರಿಗೆ ಪಾವತಿದಾರರಿಗೆ ಸಹಕಾರಿಯಾಗಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com