ದೇಶ ವಿರೋಧಿ ಹೇಳಿಕೆ: ಕೋಲ್ಕತ್ತಾದ ಟಿಪ್ಪು ಸುಲ್ತಾನ್ ಮಸೀದಿಯ ಮುಖ್ಯ ಪಾದ್ರಿ ವಜಾ

ದೇಶ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಇಲ್ಲಿನ ಖ್ಯಾತ ಟಿಪ್ಪು ಸುಲ್ತಾನ ಮಸೀದಿಯ ಮುಖ್ಯ ಪಾದ್ರಿ ಮೌಲಾನಾ...
ಮೌಲಾನಾ ನೂರ್ ಉರ್ ರೆಹಮಾನ್ ಬರ್ಕತಿ
ಮೌಲಾನಾ ನೂರ್ ಉರ್ ರೆಹಮಾನ್ ಬರ್ಕತಿ
ಕೋಲ್ಕತ್ತಾ: ದೇಶ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಇಲ್ಲಿನ ಖ್ಯಾತ ಟಿಪ್ಪು ಸುಲ್ತಾನ ಮಸೀದಿಯ ಮುಖ್ಯ ಪಾದ್ರಿ ಮೌಲಾನಾ ನೂರುರ್-ರೆಹಮಾನ್ ಬರ್ಕತಿ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ವಕ್ಫ್ ಟ್ರಸ್ಟಿ ಮಂಡಳಿ ತಿಳಿಸಿದೆ.
ಹುದ್ದೆಯಿಂದ ವಜಾಗೊಳಿಸಿದ ನೊಟೀಸನ್ನು ಅವರಿಗೆ ಕಳುಹಿಸಲಾಗಿದ್ದು, ಅವರಿಗೆ ನೀಡಲಾಗಿದ್ದ ಕಚೇರಿ ಕೋಣೆಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಸದ್ಯ ಅವರ ಕೆಳಗಿನ ಪಾದ್ರಿಯವರಿಗೆ ಪ್ರಾರ್ಥನೆ ಸಲ್ಲಿಸುವಂತೆ ಹೇಳಲಾಗಿದ್ದು ಹೊಸ ಪಾದ್ರಿಯನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ವಕ್ಫ್ ಟ್ರಸ್ಟ್ ನ ಪ್ರಿನ್ಸ್ ಗುಲಾಮ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶ ವಿರೋಧಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮಸೀದಿಯ ಇಮಾಮ್ ಹುದ್ದೆಯಿಂದ ಅವರನ್ನು ತೆಗೆಯಲಾಗಿದೆ. ಧಾರ್ಮಿಕ ವ್ಯಕ್ತಿಯಾಗಿರುವ ಇಮಾಮ್ ತನ್ನ ವ್ಯಾಪ್ತಿ ಮೀರಿ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಾವು ನಿರೀಕ್ಷಿಸುವುದಿಲ್ಲ ಎಂದು ಹೇಳಿದರು.
ಬರ್ಕತಿಯವರು ಇತ್ತೀಚೆಗೆ ಜನರ ಭಾವನೆಗಳನ್ನು ಉದ್ರೇಕಿಸುವ ಹೇಳಿಕೆ ನೀಡಿದ್ದಕ್ಕಾಗಿ ಶೋಕಾಸ್ ನೊಟೀಸ್ ನೀಡಲಾಗಿತ್ತು. ಅಲ್ಲದೆ ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿದ ವಿಐಪಿ ಕಾರುಗಳಲ್ಲಿ ಕೆಂಪು ದೀಪವನ್ನು ತೆಗೆಯಬೇಕೆಂಬ ನಿಯಮವನ್ನು ಅವರು ಪಾಲಿಸಿರಲಿಲ್ಲ. ತಾವು ಧಾರ್ಮಿಕ ಮುಖಂಡನಾಗಿದ್ದು ಕೆಂಪು ದೀಪದ ಕಾರುಗಳನ್ನು ಬಳಸುವುದು ತಮ್ಮ ಹಕ್ಕು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com