ಕೂಡಂಕುಳಂ ಪರಮಾಣು ಘಟಕ: ಪ್ರಧಾನಿ ಕಾರ್ಯಾಲಯದ ಅನುಮೋದನೆಗೆ ಕಾಯುತ್ತಿರುವ 5,6ನೇ ಘಟಕಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಧ್ಯೆ ನಡೆಯಲಿರುವ...
ಕೂಡಂಕುಳಂ ಪರಮಾಣು ವಿದ್ಯುತ್ ಘಟಕ
ಕೂಡಂಕುಳಂ ಪರಮಾಣು ವಿದ್ಯುತ್ ಘಟಕ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಧ್ಯೆ ನಡೆಯಲಿರುವ ಸಭೆಗೆ ಕೇವಲ 15 ದಿನ ಬಾಕಿ ಇರುವಾಗ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಕೂಡಂಕುಳಂ ಪರಮಾಣು ಘಟಕದ 5 ಮತ್ತು 6ನೇ  ಘಟಕಗಳ ಒಪ್ಪಿಗೆಗೆ ಕಾಯಲಾಗುತ್ತಿದೆ.
ತಮಿಳು ನಾಡಿನ 5 ಮತ್ತು 6ನೇ  ಘಟಕಗಳಿಗೆ ಸಾಮಾನ್ಯ ಚೌಕಟ್ಟು ಒಪ್ಪಂದಗಳನ್ನು ಅಂತರ ಸಚಿವಾಲಯ ಗುಂಪು ಅನುಮೋದಿಸಿ ಪ್ರಧಾನ ಮಂತ್ರಿ ಕಾರ್ಯಾಲಯದ ಒಪ್ಪಿಗೆಗಾಗಿ ಕಳುಹಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ರಷ್ಯಾ ಕಡೆ ಯಾವುದೇ ಅಂತಿಮ ಭರವಸೆ ನೀಡಿಲ್ಲ. ಒಪ್ಪಂದ ಮೋದಿ ಹಾಗೂ ಪುಟಿನ್ ಮಧ್ಯೆ ಜೂನ್ 1 ರಂದು ನಡೆಯುವ ಮಾತುಕತೆ ವೇಳೆ ಚರ್ಚೆಗೆ ಬರಲಿದೆಯೇ ಎಂಬ ಬಗ್ಗೆ ಕೂಡ ಯಾವುದೇ ಮಾಹಿತಿ ಸಿಕ್ಕಿಲ್ಲ.
ಯಾವುದೇ ಯೋಜನೆ ಆರಂಭವಾಗುವ ಮುನ್ನ ಸಾಮಾನ್ಯ ಚೌಕಟ್ಟು ಒಪ್ಪಂದ ಅಂತಿಮವಾಗಿರುತ್ತದೆ.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com