ತ್ರಿವಳಿ ತಲಾಖ್ ಅಳಿವಿನ ಅಂಚಿನಲ್ಲಿರುವ ಪದ್ಧತಿ, ಪರಿಶೀಲಿಸಿದಷ್ಟೂ ಹೆಚ್ಚುತ್ತದೆ: ಎಐಎಂಪಿಎಲ್‌ಬಿ

ತ್ರಿವಳಿ ತಲಾಖ್ ಕುರಿತು ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ದ್ವಂದ್ವ ಮತ್ತೊಮ್ಮೆ ಬಹಿರಂಗವಾಗಿದ್ದು, 1,400 ವರ್ಷಗಳಷ್ಟು ಪುರಾತನ ನಂಬಿಕೆಯನ್ನು ಈಗ ಅಳಿವಿನ ಅಂಚಿನಲ್ಲಿರುವ ಪದ್ಧತಿ ಎಂದು ಹೇಳಿದೆ.
ತ್ರಿವಳಿ ತಲಾಖ್ ಅಳಿವಿನ ಅಂಚಿನಲ್ಲಿರುವ ಪದ್ಧತಿ: ಎಐಎಂಪಿಎಲ್‌ಬಿ
ತ್ರಿವಳಿ ತಲಾಖ್ ಅಳಿವಿನ ಅಂಚಿನಲ್ಲಿರುವ ಪದ್ಧತಿ: ಎಐಎಂಪಿಎಲ್‌ಬಿ
ನವದೆಹಲಿ: ತ್ರಿವಳಿ ತಲಾಖ್ ಕುರಿತು ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ದ್ವಂದ್ವ ಮತ್ತೊಮ್ಮೆ ಬಹಿರಂಗವಾಗಿದ್ದು, 1,400 ವರ್ಷಗಳಷ್ಟು ಪುರಾತನ ನಂಬಿಕೆಯನ್ನು ಈಗ ಅಳಿವಿನ ಅಂಚಿನಲ್ಲಿರುವ ಪದ್ಧತಿ ಎಂದು ಹೇಳಿದೆ. 
ತಲಾಖ್ ಪದ್ಧತಿ ಅಳಿವಿನ ಅಂಚಿನಲ್ಲಿದ್ದು ಈ ಹಂತದಲ್ಲಿ ಅದನ್ನು ಪರಿಶೀಲಿಸಿದರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಐಎಂಪಿಎಲ್‌ಬಿ ಸುಪ್ರೀಂ ಕೋರ್ಟ್ ಎದುರು ವಾದ ಮಂಡಿಸಿದೆ. ತಲಾಖ್ ಬಗ್ಗೆ ಸುಪ್ರೀಂ ಕೋರ್ಟ್ ನಂತಹ ಜಾತ್ಯಾತೀತ ವೇದಿಕೆಗಳಲ್ಲಿ ಚರ್ಚಿಸಿದಷ್ಟೂ ಆ ಪದ್ಧತಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಸುಪ್ರೀಂ ಕೋರ್ಟ್ ಗೆ ಮೇ.17 ರಂದು ಹೇಳಿದೆ. 
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸುಪ್ರೀಂ ಕೋರ್ಟ್ ಬಗ್ಗೆ ನಂಬಿಕೆ ಇದೆ. ಕಳೆದ 67 ವರ್ಷಗಳಿಂದ ಇರುವ ಈ ನಂಬಿಕೆಯೇ ದೇಶವನ್ನು ವೈವಿಧ್ಯಮಯವಾಗಿರುಸುವುದಕ್ಕೆ ಸಹಕಾರಿಯಾಗಿದೆ ಎಂದು ಎಐಎಂಪಿಎಲ್‌ಬಿ ಪರ ವಾದ ಮಂಡಿಸಿರುವ ಕಪಿಲ್ ಸಿಬಲ್ ಹೇಳಿದ್ದಾರೆ. 
ತಲಾಖ್ ಪದ್ಧತಿಯನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದರ ಬಗ್ಗೆ ವಿವಾಹ ಸಂದರ್ಭದಲ್ಲೇ ಮುಸ್ಲಿಮ್ ಮಹಿಳೆಯರ ಸ್ಪಷ್ಟನೆಯನ್ನು ತಿಳಿದುಕೊಳ್ಳುವುದಕ್ಕೆ ಮುಸ್ಲಿಮ್ ಮೌಲ್ವಿಗಳಿಗೆ ಎಐಎಂಪಿಎಲ್‌ಬಿ ನಿರ್ದೇಶನ ನೀಡಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರಾದ ಜೆಎಸ್ ಖೇಹರ್ ಕೇಳಿದ್ದಾರೆ. ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿದ ನಂತರ ಈ ಬಗ್ಗೆ ಎಐಎಂಪಿಎಲ್‌ಬಿ ಪ್ರತಿಕ್ರಿಯೆ ನೀಡಲಿದೆ ಎಂದು ಎಐಎಂಪಿಎಲ್‌ಬಿ ಪರ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com