ಮಾಲೇಗಾಂವ್ ಚುನಾವಣಾ ಕಣದಲ್ಲಿ ಬಿಜೆಪಿಯ 45 ಮುಸ್ಲಿಂ ಅಭ್ಯರ್ಥಿಗಳು

ಮೇ 24ರಂದು ಮಾಲೇಗಾಂವ್ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು ಈ ಬಾರಿ ಬಿಜೆಪಿ 77 ಅಭ್ಯರ್ಥಿಗಳ ಪೈಕಿ ಬರೋಬ್ಬರಿ 45 ಮುಸ್ಲಿಂ ಅಭ್ಯರ್ಥಿಗಳನ್ನು...
ಬಿಜೆಪಿ
ಬಿಜೆಪಿ
ಮುಂಬೈ: ಮೇ 24ರಂದು ಮಾಲೇಗಾಂವ್ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು ಈ ಬಾರಿ ಬಿಜೆಪಿ 77 ಅಭ್ಯರ್ಥಿಗಳ ಪೈಕಿ ಬರೋಬ್ಬರಿ 45 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 
ಮಾಲೇಂಗಾವ್ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಇದೀಗ 73 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಎನ್ಸಿಪಿ ಮತ್ತು ಜನತಾ ದಳ(ಜಾತ್ಯಾತೀತ) ಮೈತ್ರಿಕೂಟ 66 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 
ಹೈದರಾಬಾದ್ ಮೂಲದ ಮತ್ತು ಅಸಾವುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್ ಇತ್ತೇಹದುಲ್ ಮುಸ್ಲಿಂ(ಎಐಎಂಐಎಂ) ಇದೇ ಮೊದಲ ಬಾರಿಗೆ ಪಕ್ಷದ 37 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಶಿವಸೇನೆಯ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 
ಹಿಂದಿನ ಚುನಾವಣೆಯಲ್ಲಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಸಂಪೂರ್ಣವಾಗಿ ಸೋಲು ಅನುಭವಿಸಿತ್ತು. 12 ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com