ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ನಿಲ್ದಾಣ: ದರ್ಭಂಗ ಅತ್ಯಂತ ಕೊಳಕು!

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ದೇಶದ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ಪ್ರಕಟಿಸಿದ್ದು, ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಖ್ಯಾತಿ ಪಡೆದಿದೆ.
ರೈಲು ನಿಲ್ದಾಣ
ರೈಲು ನಿಲ್ದಾಣ
ನವದೆಹಲಿ: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ದೇಶದ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ಪ್ರಕಟಿಸಿದ್ದು, ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಖ್ಯಾತಿ ಪಡೆದಿದೆ. 
ದೇಶಾದ್ಯಂತ ಅತಿ ಹೆಚ್ಚು ಕಾರ್ಯನಿರ್ವಹಿಸುವ 75 ರೈಲು ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೆ ನಿಲ್ದಾಣ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದು, ಸಿಕಂದರಾಬಾದ್ ರೈಲ್ವೆ ನಿಲ್ದಾಣ 2 ನೇ ಸ್ಥಾನ, ಜಮ್ಮು-ಕಾಶ್ಮೀರ ರೈಲು ನಿಲ್ದಾಣ 3 ನೇ ಸ್ಥಾನ ಪಡೆದಿದೆ. 
ಸ್ವಚ್ಛ ರೈಲ್ ಅಭಿಯಾನದ ಅಡಿಯಲ್ಲಿ ರೈಲ್ವೆ ಇಲಾಖೆ ದೇಶದ ಸ್ವಚ್ಛ ರೈಲು ನಿಲ್ದಾಣಗಳ ಸಮೀಕ್ಷೆ ನಡೆಸಲಾಗಿದ್ದು ರಾಷ್ಟ್ರರಾಜಧಾನಿ ನವದೆಹಲಿ ರೈಲು ನಿಲ್ದಾಣ 39 ನೇ ಶ್ರೇಣಿಯಲ್ಲಿದೆ.  ಆಂಧ್ರಪ್ರದೇಶದ ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದರೆ, ಬಿಹಾರದ ದರ್ಭಂಗ ಅತ್ಯಂತ ಕೊಳಕು ರೈಲು ನಿಲ್ದಾಣವಾಗಿದೆ. 
ರೈಲಿನಲ್ಲಿರುವ ಶೌಚಾಲಯಗಳ ಸ್ವಚ್ಛತೆ, ರೈಲು ಹಳಿಗಳ ಸ್ವಚ್ಛತೆ, ನಿಲ್ದಾಣಗಳಲ್ಲಿರುವ ಕಸದ ಬುಟ್ಟಿ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ಘೋಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com