ಪಾಪ ಕೃತ್ಯವಾದ ತ್ರಿವಳಿ ತಲಾಖ್ ಹೇಗೆ ನಂಬಿಕೆಯ ವಿಷಯವಾಗುತ್ತೆ?: ಮುಸ್ಲಿಂ ಸಂಘಟನೆಗಳಿಗೆ ಸುಪ್ರೀಂ ಪ್ರಶ್ನೆ

ತ್ರಿವಳಿ ತಲಾಖ್ ಪದ್ಧತಿ ಪಾಪಕೃತ್ಯವಾಗಿದ್ದು ಅದನ್ನು ನಂಬಿಕೆಯ ಪ್ರಶ್ನೆ ಎಂದು ಹೇಗೆ ಹೇಳುತ್ತೀರಿ ಎಂದು ಸುಪ್ರೀಂ ಕೋರ್ಟ್ ಮುಸ್ಲಿಂ ಸಂಘಟನೆಗಳನ್ನು ಪ್ರಶ್ನಿಸಿವೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ತ್ರಿವಳಿ ತಲಾಖ್ ಪದ್ಧತಿ ಪಾಪಕೃತ್ಯವಾಗಿದ್ದು ಅದನ್ನು ನಂಬಿಕೆಯ ಪ್ರಶ್ನೆ ಎಂದು ಹೇಗೆ ಹೇಳುತ್ತೀರಿ ಎಂದು ಸುಪ್ರೀಂ ಕೋರ್ಟ್ ಮುಸ್ಲಿಂ ಸಂಘಟನೆಗಳನ್ನು ಪ್ರಶ್ನಿಸಿವೆ. 
ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠದ ನ್ಯಾ.ಜೆಎಸ್ ಖೇಹರ್ ನೇತೃತ್ವದ ಪಂಚಸದಸ್ಯ ಪೀಠ ತ್ರಿವಳಿ ತಲಾಖ್ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಕುರಾನ್ ನಲ್ಲಿ ತ್ರಿವಳಿ ತಲಾಖ್ ಬಗ್ಗೆ ಉಲ್ಲೇಖವಿಲ್ಲ, ಆದ್ದರಿಂದ ಅದು ಪಾಪ ಹಾಗೂ ಕೆಟ್ಟ ಪದ್ಧತಿಯಾಗಿದ್ದು, ಸುಪ್ರೀಂ ಕೋರ್ಟ್ ಇದನ್ನು ಪರಿಶೀಲನೆ ಮಾಡಬಾರದು ಎಂದು ವಿಚಾರಣೆ ವೇಳೆ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದ ಮಂಡಿಸಿತ್ತು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್, ತಲಾಖ್ ನ್ನು ಪಾಪ ಕೃತ್ಯ ಎನ್ನುತೀರಿ, ಹಾಗೆಯೇ ತಲಾಖ್ ನ್ನು 1,400 ವರ್ಷಗಳಿಂದ ನಡೆದುಬಂದಿರುವ ನಂಬಿಕೆ ಎನ್ನುತ್ತೀರಿ ಪಾಪಕೃತ್ಯ ಹೇಗೆ ಪುರಾತನ ನಂಬಿಕೆಯಾಗಲು ಸಾಧ್ಯ ಎಂದು ಪ್ರಶ್ನಿಸಿದೆ. 
ತ್ರಿವಳಿ ತಲಾಖ್ ಎಂಬುದು ಪ್ರಪಂಚದಾದ್ಯಂತ ನಡೆಯುತ್ತಿದೆಯಾ? ಇಲ್ಲ, ಈ ಪದ್ಧತಿಯೇ ಕೆಟ್ಟ ಪದ್ಧತಿ ಎಂದು ತೀರ್ಪನ್ನು ಕಾಯ್ದಿರಿಸಿರುವ ಕೋರ್ಟ್ ಅಭಿಪ್ರಾಯಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com