ಹುರಿಯಾತ್ ನಾಯಕರ ನಿಜ ಬಣ್ಣ ಬಯಲಾಗಬೇಕು: ಬಿಜೆಪಿ

ಪಾಕಿಸ್ತಾನದಿಂದ ಕಾಶ್ಮೀರದ ಹುರಿಯಾತ್ ಮುಖಂಡರು ಅಕ್ರಮವಾಗಿ ಹಣ ಪಡೆದು ಹಿಂಸೆ ಎಬ್ಬಿಸುತ್ತಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪಾಕಿಸ್ತಾನದಿಂದ ಕಾಶ್ಮೀರದ ಹುರಿಯಾತ್ ಮುಖಂಡರು ಅಕ್ರಮವಾಗಿ ಹಣ ಪಡೆದು ಹಿಂಸೆ ಎಬ್ಬಿಸುತ್ತಾರೆ ಎಂಬ  ರಾಷ್ಟ್ರೀಯ ತನಿಖಾ ಸಂಸ್ಥೆಯ ವರದಿಗಳ  ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷ ಆರೋಪಿಗಳನ್ನು ತನಿಖೆ ನಡೆಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದೆ.
ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಮಾತನಾಡಿ, ಅಕ್ರಮ ಮೂಲಗಳಿಂದ ಹುರಿಯಾತ್ ನಾಯಕರು ಹಣ ಸ್ವೀಕರಿಸುತ್ತಿದ್ದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಹುರಿಯಾತ್ ಕಾನ್ಫರೆನ್ಸ್ ನಾಯಕರು ಅಕ್ರಮ ಮೂಲಗಳ ಮೂಲಕ ಪಾಕಿಸ್ತಾನದಿಂದ ಹಣ ಪಡೆದು ಜಮ್ಮು-ಕಾಶ್ಮೀರದಲ್ಲಿ ವ್ಯಾಪಕ ಹಿಂಸಾಚಾರ ನಡೆಸುತ್ತಾರೆ ಎಂಬ ಬಗ್ಗೆ ನಿಖರ ಮಾಹಿತಿಗಳು ಸಿಕ್ಕಿವೆ. ಈ ಆಧಾರದಲ್ಲಿ ಪಾಕಿಸ್ತಾನದಿಂದ ನಿಜವಾಗಿಯೂ ಹಣ ಸ್ವೀಕರಿಸುವುದು ಹೌದಾದರೆ ಅದಕ್ಕೆ ಉತ್ತರ ನೀಡಲು ಕಾರಣಕರ್ತರಾಗುತ್ತಾರೆ. ಈ ಪರಿಸ್ಥಿತಿಯಲ್ಲಿ ಕೃತ್ಯದಲ್ಲಿ ಉಗ್ರಗಾಮಿಗಳು ಪಾಲ್ಗೊಂಡು ಹಣ ಭಯೋತ್ಪಾದನೆಗೆ ಸಂಬಂಧಿಸಿದ್ದಾದರೆ ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.
ಈ ಮಾತಿಗೆ ಸಹಮತ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಜಿ.ವಿ.ಎಲ್. ನರಸಿಂಹ ರಾವ್, ಪಾಕಿಸ್ತಾನದಿಂದ ಹುರಿಯಾತ್ ನಾಯಕರು ಹಣ ಸ್ವೀಕರಿಸುತ್ತಾರೆ ಎಂಬುದು ತೆರೆದ ರಹಸ್ಯವಾಗಿದ್ದು, ಅದನ್ನು ಬಯಲಿಗೆಳೆಯಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com