ಇಂಡೊ-ಚೀನಾ ಸಂಬಂಧ ವೃದ್ಧಿ ಗಡಿಯಲ್ಲಿ ಆತಂಕ ಕಡಿಮೆ ಮಾಡಿದೆ: ರಾಜನಾಥ್ ಸಿಂಗ್

ಭಾರತ-ಚೀನಾ ಗಡಿ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕುರಿತು ಪರಾಮರ್ಶೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗಾಂಗ್ ಟಾಕ್(ಸಿಕ್ಕಿಂ): ಭಾರತ-ಚೀನಾ ಗಡಿ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕುರಿತು ಪರಾಮರ್ಶೆ ನಡೆಸಿದ ರಾಜನಾಥ್ ಸಿಂಗ್, ನೆರೆ ದೇಶಗಳ ನಡುವಣ  ಸಂಬಂಧ ಉತ್ತಮವಾಗಿದ್ದು, ಇದರಿಂದ ಎರಡು ದೇಶಗಳ ನಡುವಣ ವಿವಾದ ಕಡಿಮೆಯಾಗಿದೆ ಎಂದು ಹೇಳಿದರು.
 ಭಾರತ-ಚೀನಾ ಗಡಿ ಭಾಗಗಳ ನಡುವಣ ವಿವಾದಕ್ಕೆ ಸಂಬಂಧಪಟ್ಟಂತೆ ಗ್ರಹಿಕೆ ವ್ಯತ್ಯಾಸಗಳಿವೆ. ಮಾತುಕತೆ ನಡೆಯುತ್ತಿದೆ. ಭಾರತ-ಚೀನಾ ಸಂಬಂಧ ಉತ್ತಮವಾಗಿದ್ದು ಇದರಿಂದಾಗಿ ಎರಡೂ ದೇಶಗಳ ನಡುವೆ ಕದನ ಕಡಿಮೆಯಾಗಿದೆ ಎಂದರು.
ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಅವರು ಪರಿಶೀಲನೆ ನಡೆಸಿದರು.
ಭಾರತ-ಚೀನಾ ಗಡಿ ಭಾಗದಲ್ಲಿ ನಡೆಯುತ್ತಿರುವ ಮೂಲಭೂತ ಅಭಿವೃದ್ಧಿ ಕೆಲಸಗಳ ಕುರಿತು ಇಂದಿನ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು. ಗೃಹ ಸಚಿವಾಲಯ 27 ರಸ್ತೆಗಳ ಕಾಮಗಾರಿ ನಡೆಸುತ್ತಿದ್ದು ಅವುಗಳ ನಿರ್ಮಾಣ ಕಾರ್ಯ 2019-20ರ ವೇಳೆಗೆ ಪೂರ್ಣಗೊಳ್ಳಲಿದೆ. 48 ಇತರ ರಸ್ತೆಗಳ ಅನುಮೋದನೆ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com