ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ದೇಶ
ವೃತ್ತಿಪರರಿಗೆ ನೀಡುವ ಹೆಚ್-1ಬಿ ವೀಸಾ ಸಂಖ್ಯೆ ಕಡಿಮೆಯಾಗಲು ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್
ಅಮೆರಿಕಾದ ವಿವಾದಾಸ್ಪದ ವೀಸಾ ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ
ನವದೆಹಲಿ: ಅಮೆರಿಕಾದ ವಿವಾದಾಸ್ಪದ ವೀಸಾ ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಐಟಿ ವೃತ್ತಿಪರರಿಗೆ ಹೆಚ್-1ಬಿ ವೀಸಾಗಳ ನೀಡಿಕೆಯ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಭಾರತದ ಐಟಿ ಉದ್ಯಮ ಈ ವಿಚಾರದಲ್ಲಿ ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವೀಸಾ ವಿಷಯದಲ್ಲಿ ಆತಂಕಪಡುವ ಅಗತ್ಯವಿಲ್ಲ. ಇದರಲ್ಲಿ ತಿದ್ದುಪಡಿ ಮಾಡಲು ಲಾಟರಿ ಪ್ರಕ್ರಿಯೆಯನ್ನು ಬಳಸುತ್ತಾರೆ ಎಂದು ಭಾವಿಸುತ್ತೇನೆ. ವೀಸಾಗಳ ಸಂಖ್ಯೆಯನ್ನು ಬದಲಾಯಿಸಲಿಕ್ಕಿಲ್ಲ. ವೀಸಾಗಳ ಸಂಖ್ಯೆ ಇಳಿಮುಖವಾಗುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಕಳೆದ ಕೆಲ ವಾರಗಳಲ್ಲಿ ಅಮೆರಿಕಾ ಸೇರಿದಂತೆ ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಸುರಕ್ಷತೆಯ ಭಾವನೆ ಬೆಳೆಯುತ್ತಿದ್ದು ಸ್ಥಳೀಯರಿಗೆ ಉದ್ಯೋಗಗಳನ್ನು ಹೆಚ್ಚಿಸಿ ಭದ್ರತೆ ನೀಡಲು ವಿದೇಶಗಳ ನೌಕರರಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಈಗಿನ ಲಾಟರಿ ವ್ಯವಸ್ಥೆಯ ಬದಲಿಗೆ ಅರ್ಹತೆ ಆಧಾರಿತ ವಲಸೆ ನೀತಿಗೆ ಬದಲಾಯಿಸಲು ಒಲವು ತೋರುತ್ತಿದೆ. ಅಮೆರಿಕಾದ ಒಟ್ಟು ವೀಸಾದಡಿ ಕೇವಲ ಶೇಕಡಾ 17ರಷ್ಟು ಮಾತ್ರ ಭಾರತೀಯ ಕಂಪೆನಿಗಳಿಗೆ ಹೋಗುತ್ತಿದೆ ಎಂದು ವಿವರಿಸಿದರು.
ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಅತಿ ಕೌಶಲ್ಯ ಬೇಕೆಂದರೆ ಅಂತಹ ನೌಕರರನ್ನೇ ನೇಮಕ ಮಾಡಿಕೊಳ್ಳುತ್ತಾರೆ. ವೀಸಾ ಆಯ್ಕೆ ಪ್ರಕ್ರಿಯೆ ಸೀಮಿತವಾಗಬಹುದೆ ಹೊರತು ಸಂಖ್ಯೆ ಬದಲಾಗಲು ಸಾಧ್ಯವಿಲ್ಲ ಎಂದರು.

