ಚುನಾವಣಾ ಆಯೋಗ
ಚುನಾವಣಾ ಆಯೋಗ

ಚುನಾವಣೆಗೆ ಸ್ಪರ್ಧಿಸಲು ಸರ್ಕಾರಿ ಹಣ ಪ್ರಸ್ತಾವನೆಗೆ ಬೆಂಬಲವಿಲ್ಲ: ಚುನಾವಣಾ ಆಯೋಗ

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅಥವಾ ಚುನಾವಣೆಗೆ ಸರ್ಕಾರಿ ಹಣ ನೀಡುವ (ಸ್ಟೇಟ್ ಫಂಡಿಂಗ್) ಪ್ರಸ್ತಾವನೆಗೆ ತನ್ನ ಬೆಂಬಲವಿಲ್ಲ ಎಂದು ಚುನಾವಣಾ ಆಯೋಗ ಸಂಸದೀಯ ಸಮಿತಿಗೆ ಹೇಳಿದೆ.
Published on
ನವದೆಹಲಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅಥವಾ ಚುನಾವಣೆಗೆ ಸರ್ಕಾರಿ ಹಣ ನೀಡುವ (ಸ್ಟೇಟ್ ಫಂಡಿಂಗ್) ಪ್ರಸ್ತಾವನೆಗೆ ತನ್ನ ಬೆಂಬಲವಿಲ್ಲ, ಬದಲಾಗಿ ರಾಜಕೀಯ ಪಕ್ಷಗಳು ದೇಣಿಗೆ ಹಣವನ್ನು ಖರ್ಚು ಮಾಡುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಜಾರಿಗೆ ತರುವುದಕ್ಕೆ ಬೆಂಬಲವಿದೆ ಎಂದು ಚುನಾವಣಾ ಆಯೋಗ ಸಂಸದೀಯ ಸಮಿತಿಗೆ ಹೇಳಿದೆ. 
ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಹಾಗೂ ಪಕ್ಷಗಳಿಗೆ ಖಾಸಗಿ ವ್ಯಕ್ತಿಗಳು ಹಣಕಾಸಿನ ನೆರವು ನೀಡುವ ವ್ಯವಸ್ಥೆ ಚಾಲ್ತಿಯಲ್ಲಿದ್ದು, ಈಗಿರುವ ವ್ಯವಸ್ಥೆಯನ್ನು ಬದಲಾಯಿಸಿ ಸರ್ಕಾರದಿಂದಲೇ ಹಣಕಾಸಿನ ನೆರವು ನೀಡುವುದು ಸ್ಟೇಟ್ ಫಂಡಿಂಗ್ ವ್ಯವಸ್ಥೆಯ ಉದ್ದೇಶವಾಗಿದೆ. ಹಲವು ದೇಶಗಳಲ್ಲಿ ಈ ಮಾದರಿ ಚಾಲ್ತಿಯಲ್ಲಿದ್ದು, ಭಾರತದಲ್ಲಿಯೂ ಸಹ ಈ  ವ್ಯವಸ್ಥೆ ಜಾರಿಯಾಗುವುದರ ಬಗ್ಗೆ ಚರ್ಚೆ ನಡೆಯುತ್ತಿವೆ. 
ಸ್ಟೇಟ್ ಫಂಡಿಂಗ್ ವ್ಯವಸ್ಥೆಗೆ ತನ್ನ ಬೆಂಬಲವಿಲ್ಲ ಎಂದು ಚುನಾವಣಾ ಆಯೋಗ ಸಂಸದೀಯ ಸಮಿತಿಗೆ ಹೇಳಿದೆ. ಸ್ಟೇಟ್ ಫಂಡಿಂಗ್ ನ್ನು ವಿರೋಧಿಸುತ್ತಿರುವುದಕ್ಕೆ ಕಾರಣವನ್ನೂ ನೀಡಿರುವ ಚುನಾವಣಾ ಆಯೋಗ,  ಸ್ಟೇಟ್ ಫಂಡಿಂಗ್ ಮೂಲಕ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕುವುದು ಕಷ್ಟಸಾಧ್ಯವಾಗುತ್ತದೆ. ಇದರಿಂದಾಗಿ ಪಾರದರ್ಶಕತೆ ಕಾಪಾಡುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಸಂಸತ್ ನ ಕಾನೂನು ಹಾಗೂ ಸಿಬ್ಬಂದಿ ಸ್ಥಾಯಿ ಸಮಿತಿಗೆ ಲಿಖಿತ ಹೇಳಿಕೆ ನೀಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com