ಐಷಾರಾಮಿ ತೇಜಸ್ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

ಅತ್ಯಾಧುನಿಕ ಸವಲತ್ತಗಳನ್ನು ಹೊಂದಿದ್ದ ತೇಜಸ್ ಎಕ್ಸ್‌ಪ್ರೆಸ್‌ ರೈಲು ಮೇ 22ರಂದು ಮುಂಬೈನಿಂದ ಗೋವಾಕ್ಕೆ ಮೊದಲ ಪ್ರಯಾಣ ಆರಂಭಿಸಲಿತ್ತು ಈ ಮಧ್ಯೆ ರೈಲಿಗೆ...
ತೇಜಸ್ ಎಕ್ಸ್‌ಪ್ರೆಸ್‌ ರೈಲು
ತೇಜಸ್ ಎಕ್ಸ್‌ಪ್ರೆಸ್‌ ರೈಲು
Updated on: 
ಮುಂಬೈ: ಅತ್ಯಾಧುನಿಕ ಸವಲತ್ತಗಳನ್ನು ಹೊಂದಿದ್ದ ತೇಜಸ್ ಎಕ್ಸ್‌ಪ್ರೆಸ್‌ ರೈಲು ಮೇ 22ರಂದು ಮುಂಬೈನಿಂದ ಗೋವಾಕ್ಕೆ ಮೊದಲ ಪ್ರಯಾಣ ಆರಂಭಿಸಲಿತ್ತು ಈ ಮಧ್ಯೆ ರೈಲಿಗೆ ದುಷ್ಕರ್ಮಿಗಳು ಕಲ್ಲೆಸೆದು, ಕಿಟಕಿ ಗಾಜನ್ನು ಪುಡಿ ಮಾಡಿದ್ದಾರೆ. 
ತೇಜಸ್ ಎಕ್ಸ್‌ಪ್ರೆಸ್‌ ರೈಲಿನ ಪ್ರತಿ ಬೋಗಿಯಲ್ಲೂ ಟಿವಿ, ಕಾಫಿ ಮತ್ತು ಟೀ ಯಂತ್ರಗಳು ಸೇರಿದಂತೆ ಅತ್ಯಾಧುನಿಕ ಸವಲತ್ತುಗಳನ್ನು ಅಳವಡಿಸಲಾಗಿದೆ. ರೈಲು ಸೋಮವಾರ ಮೊದಲ ಪ್ರಯಾಣ ಆರಂಭಿಸಲಿದ್ದು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಈ ರೈಲು ಹೊರಡಲಿದೆ. 
ಕಳೆದ ಬಜೆಟ್ ನಲ್ಲಿ ಮುಂಬೈ-ಗೋವಾ ನಡುವೆ ತೇಜಸ್ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭಿಸುವ ಬಗ್ಗೆ ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ ದೆಹಲಿ-ಚಂಢೀಗಡ ಮಾರ್ಗದಲ್ಲಿ ತೇಜಸ್ ಎಕ್ಸ್‌ಪ್ರೆಸ್‌ ಸಂಚರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com