ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ 150 ದೇಶಗಳಲ್ಲಿ ಪ್ರಸಾರವಾಗುತ್ತಿದ್ದು ಎಲ್ಲ ದೇಶಗಳಲ್ಲೂ ಭಾರತೀಯ ಮೂಲದವರಿಂದ ಅದ್ಭುತ ಪ್ರತಿಕ್ರಿಯೆ ಬಂದಿದೆ ಎಂದು ಆಲ್ ಇಂಡಿಯಾ ರೇಡಿಯೊ(ಎಐಆರ್) ಹೇಳಿದೆ.
ಮನ್ ಕೀ ಬಾತ್ ಭಾಷಣ ನೇರ ಪ್ರಸಾರ ಹಿಂದಿಯಲ್ಲಿರುತ್ತದೆ ಮತ್ತು ಇಂಗ್ಲಿಷ್ ಭಾಷಾಂತರಗಳು ರಷ್ಯನ್, ಫ್ರೆಂಚ್, ಉರ್ದು ಮತ್ತು ಚೈನೀಸ್ ಭಾಷೆಗಳಲ್ಲೂ ಪ್ರಸಾರವಾಗುತ್ತದೆ ಎಂದು ಆಲ್ ಇಂಡಿಯಾ ರೇಡಿಯೊ ಹೇಳಿದೆ.
ಮೋದಿ ಅವರ ಭಾಷಣ ಪ್ರಸಾರದ ವೇಳೆ ಜಗತ್ತಿನಾದ್ಯಂತ ಭಾರೀ ಸಂಖ್ಯೆಯ ಕೇಳುಗರು ಕಾರ್ಯಕ್ರಮ ಆಲಿಸುತ್ತಾರೆ, ಪ್ರತಿಕ್ರಿಯಿಸುತ್ತಾರೆ ಎಂದು ಎಐಆರ್ ವಿದೇಶಾಂಗ ಸೇವಾ ವಿಭಾಗೀಯ ನಿರ್ದೇಶಕ ಅಮ್ಲಾನ್ ಜ್ಯೋತಿ ಹೇಳಿದ್ದಾರೆ.