ಉತ್ತರ ಕಾಶ್ಮೀರದಲ್ಲಿ 90 ಉಗ್ರರು ಸಕ್ರಿಯ: ಐಜಿಪಿ

ಉತ್ತರ ಕಾಶ್ಮೀರದಲ್ಲಿ 90 ಉಗ್ರರು ಸಕ್ರಿಯರಾಗಿದ್ದು, ಎಲ್ಒಸಿಯ ಮೂಲಕ ಉಗ್ರರ ಒಳ ನುಸುಳುವಿಕೆಯನ್ನು ತಡೆಗಟ್ಟಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಕಾಶ್ಮೀರ ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ.
ಭಾರತೀಯ ಸೇನೆ (ಸಂಗ್ರಹ ಚಿತ್ರ)
ಭಾರತೀಯ ಸೇನೆ (ಸಂಗ್ರಹ ಚಿತ್ರ)
ಶ್ರೀನಗರ: ಉತ್ತರ ಕಾಶ್ಮೀರದಲ್ಲಿ 90 ಉಗ್ರರು ಸಕ್ರಿಯರಾಗಿದ್ದು, ಎಲ್ಒಸಿಯ ಮೂಲಕ ಉಗ್ರರ ಒಳ ನುಸುಳುವಿಕೆಯನ್ನು ತಡೆಗಟ್ಟಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಕಾಶ್ಮೀರ ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ. 
ಉಗ್ರರು ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿರುವ ಬಗ್ಗೆ ವರದಿಗಳು ಬಂದಿದೆ. ಆದರೆ ಒಳನುಸುಳುವಿಕೆ ಹೆಚ್ಚಿರುವುದರ ಬಗ್ಗೆ ಮಾಹಿತಿ ಇಲ್ಲ ಎಂದು ಮುನೀರ್ ಖಾನ್ ತಿಳಿಸಿದ್ದಾರೆ. " ಒಳನುಸುಳುವವರಿಗೆ ಬಾರಾಮುಲ್ಲಾ ಸಾಂಪ್ರಾದಾಯಿಕ ಮಾರ್ಗವಾಗಿದೆ. ಆದರೆ ಭಾರತೀಯ ಸೇನೆ ಒಳನುಸುಳುವಿಕೆಯನ್ನು ತಡೆಗಟ್ಟಲು ಸನ್ನದ್ಧವಾಗಿದೆ ಎಂದು ಐಜಿಪಿ ಹೇಳಿದ್ದಾರೆ. 
ಕಳೆದ ವಾರ ನೌಗಾಮ್ ನಲ್ಲಿ ನಡೆದಿದ್ದ ಒಳನುಸುಳುವಿಕೆ ಯತ್ನದ ಬಗ್ಗೆ ಮಾಹಿತಿ ನೀಡಿರುವ ಐಜಿಪಿ, ಒಳನುಸುಳಲು ಯತ್ನಿಸಿದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com