ಕಲ್ಲು ತೂರಾಟಗಾರರ ನಾಯಕನನ್ನು ಜೀಪಿಗೆ ಕಟ್ಟಿ ಹಲವು ಜನರ ಪ್ರಾಣ ಉಳಿಸಿದೆ: ಮೇಜರ್ ಗೊಗೊಯ್

ಕಲ್ಲು ತೂರಾಟಗಾರರ ನಾಯಕನನ್ನು ಜೀಪಿಗೆ ಕಟ್ಟಿ ಮೆರವಣಿಗೆ ಮಾಡುವ ಮೂಲಕ ಹಲವು ಜನರ ಪ್ರಾಣ ಉಳಿಸಿದ್ದೇನೆ ಎಂದು ಮೇಜರ್....
ಮೇಜರ್ ಲೀತುಲ್ ಗೊಗೊಯ್
ಮೇಜರ್ ಲೀತುಲ್ ಗೊಗೊಯ್
ಶ್ರೀನಗರ: ಕಲ್ಲು ತೂರಾಟಗಾರರ ನಾಯಕನನ್ನು ಜೀಪಿಗೆ ಕಟ್ಟಿ ಮೆರವಣಿಗೆ ಮಾಡುವ ಮೂಲಕ ಹಲವು ಜನರ ಪ್ರಾಣ ಉಳಿಸಿದ್ದೇನೆ ಎಂದು ಮೇಜರ್ ಲೀತುಲ್ ಗೊಗೊಯ್ ಅವರು ಮಂಗಳವಾರ ಹೇಳಿದ್ದಾರೆ.
ಕಾಶ್ಮೀರದ ಯುವಕರು ಕಲ್ಲು ತೂರುವುದನ್ನು ತಡೆಯುವುದಕ್ಕಾಗಿ ಯುವಕನ್ನು ಸೇನೆಯ ಜೀಪಿನ ಮುಂಭಾಗಕ್ಕೆ ಕಟ್ಟಿ ಆತನನ್ನು ಮಾನವ ಗುರಾಣಿಯಂತೆ ಬಳಸಿದ ಮೇಜರ್ ಗೊಗೊಯ್ ಅವರು ಘಟನೆ ಕುರಿತು ಇದೇ ಮೊದಲ ಬಾರಿಗೆ ಮಾಧ್ಯಮದೊಂದಿಗೆ ಮಾತನಾಡಿದ್ದು, ನಾನು ಮತ್ತು ಇತರೆ ನಾಲ್ವರು ಸೇನಾ ಸಿಬ್ಬಂದಿ ಮತಗಟ್ಟೆಯ ಭದ್ರತೆ ಪರಿಶೀಲಿಸು ಹೋಗಿದ್ದೇವೆ. ಈ ವೇಳೆ ಕೆಲವು ಯುವಕರು ನಮ್ಮ ಮೇಲೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಎಸೆಯಲು ಆರಂಭಿಸಿದರು. ಸ್ಥಳೀಯರ ಹಾಗೂ ನಮ್ಮ ಪ್ರಾಣ ರಕ್ಷಣೆಗಾಗಿ ನಾನು ಈ ರೀತಿ ಮಾಡಿದೆ ಎಂದು ಹೇಳಿದ್ದಾರೆ.
ಶಾಂತಿಯುತವಾಗಿ ಚುನಾವಣೆ ನಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಮತಗಟ್ಟೆ ಮೇಲೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಎಸೆದು ಶಾಂತಿ ಕದಡಲು ಯತ್ನಿಸುತ್ತಿದ್ದ ಕಲ್ಲು ತೂರಾಟಗಾರರ ರಿಂಗ್ ಲೀಡರ್ ಫಾರೂಖ್ ಅಹ್ಮದ್ ನನ್ನು ಹಿಡಿದು ಜೀಪ್ ಕಟ್ಟಲಾಯಿತು. ನಮ್ಮ ಈ ಯೋಚನೆಯಿಂದ ಹಲವು ಜನರ ಜೀವ ಉಳಿದಿದೆ ಎಂದು ಮೇಜರ್ ತಿಳಿಸಿದ್ದಾರೆ.
ಇದೇ ವೇಳೆ ಇಂಡೊ-ಟಿಬೆಟಿನ್ ಬಾರ್ಡರ್ ಪೊಲೀಸರು ಬಂಡಿಪೋರಾದಲ್ಲಿ ಸುಮಾರು 400-500 ಜನ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ನೀಡದರು. ನಾನು ಕೂಡಲೇ ಆ ಸ್ಥಳಕ್ಕೆ ತೆರಳಿ 30 ನಿಮಿಷದಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸಿದೆ ಎಂದು ಲೀತುಲ್ ಗೊಗೊಯ್ ಅವರು ಹೇಳಿಕೊಂಡಿದ್ದಾರೆ.
ಯುವಕನೊಬ್ಬನನ್ನು ಜೀಪ್‌ಗೆ ಕಟ್ಟಿದ್ದ ಸೇನಾಧಿಕಾರಿ ಮೇಜರ್‌ ಲೀತುಲ್‌ ಗೊಗೊಯ್‌ ಅವರಿಗೆ ಸೇನಾ ಮುಖ್ಯಸ್ಥರ ‘ಮೆಚ್ಚುಗೆ ಪತ್ರ’ನೀಡಲಾಗಿದೆ. ಆದರೆ ಯುವಕನ್ನು ಜೀಪಿಗೆ ಕಟ್ಟಿದ ಕಾರ್ಯಕ್ಕಾಗಿ ಗೊಗೊಯಿ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿಲ್ಲ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ  ನಿರಂತರವಾಗಿ ಅವರು ತೊಡಗಿಸಿಕೊಂಡ ಕಾರಣಕ್ಕೆ ಆ ಗೌರವವನ್ನು ನೀಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com