ಅಮರನಾಥ ಯಾತ್ರೆ
ಅಮರನಾಥ ಯಾತ್ರೆ

ಕಲ್ಲು ತೂರಾಟಗಾರರ ಭೀತಿ: ಅಮರನಾಥ ಯಾತ್ರಿಗಳ ರಕ್ಷಣೆಗೆ 27 ಸಾವಿರ ಭದ್ರತಾ ಸಿಬ್ಬಂದಿಗಾಗಿ ಕೋರಿಕೆ

ಜೂ.29 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಜಮ್ಮು-ಕಾಶ್ಮೀರ ಸರ್ಕಾರ ಯಾತ್ರಿಗಳ ಭದ್ರತೆಗಾಗಿ 27,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದೆ.
ಜಮ್ಮು: ಜೂ.29 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಜಮ್ಮು-ಕಾಶ್ಮೀರ ಸರ್ಕಾರ ಯಾತ್ರಿಗಳ ಭದ್ರತೆಗಾಗಿ 27,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದೆ. 
ಅಮರನಾಥ ಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಭಯೋತ್ಪಾದಕರಿಂದ ಎದುರಾಗಲಿರವಷ್ಟೇ ಅಪಾಯ ಕಲ್ಲುತೂರಾಟಗಾರರಿಂದಲೂ ಎದುರಾಗುವ ಸಾಧ್ಯತೆ ಇದ್ದು, 27,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಅಮರನಾಥ ಯಾತ್ರೆ ಶಾಂತಿಯಿಂದ ನಡೆಯಬೇಕಿದ್ದು, 27,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ ಎಂದಿದ್ದಾರೆ. 
ಗೃಹ ಇಲಾಖೆಯ ಕಾರ್ಯದರ್ಶಿ ರಾಜೀವ್ ಮೆಹರಿಶಿ ನೇತೃತ್ವದಲ್ಲಿ ನಡೆದ ಅಮರನಾಥ ಯಾತ್ರೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆದ ಬಳಿಕ ಗೃಹ ಇಲಾಖೆಯ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಅಮರನಾಥ ಯಾತ್ರೆ ಶಾಂತಿಯುತವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com