ಮೃತ ತಾಯಿಯ ಎದೆಹಾಲು ಕುಡಿಯಲು ಯತ್ನಿಸಿದ ಮಗು: ಮಧ್ಯಪ್ರದೇಶದಲ್ಲಿ ಮನ ಕಲಕುವ ದೃಶ್ಯ

ರೈಲ್ವೆ ಹಳಿ ಸಮೀಪ ಮೃತಪಟ್ಟು ಬಿದ್ದ ಮಹಿಳೆಯ ಎದೆಹಾಲನ್ನು ಕುಡಿಯಲು ಆಕೆಯ ಮಗು...
ತಾಯಿಯ ಶವದ ಮುಂದೆ ಎದೆಹಾಲು ಕುಡಿಯಲು ಪ್ರಯತ್ನಿಸುತ್ತಿರುವ ಮಗು
ತಾಯಿಯ ಶವದ ಮುಂದೆ ಎದೆಹಾಲು ಕುಡಿಯಲು ಪ್ರಯತ್ನಿಸುತ್ತಿರುವ ಮಗು
Updated on
ದಮೊಹ್(ಮ.ಪ್ರ):  ರೈಲ್ವೆ ಹಳಿ ಸಮೀಪ ಮೃತಪಟ್ಟು ಬಿದ್ದ ಮಹಿಳೆಯ ಎದೆಹಾಲನ್ನು ಕುಡಿಯಲು ಆಕೆಯ ಮಗು ಪ್ರಯತ್ನಪಡುತ್ತಿದ್ದ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು ದೃಶ್ಯ ಮನಕಲಕುವಂತಿದೆ. ಮಗು ತಾಯಿಯನ್ನು ಎಬ್ಬಿಸಲು ಎಷ್ಟೇ ಬಾರಿ ಪ್ರಯತ್ನಪಟ್ಟರೂ ಕೂಡ ಆ ತಾಯಿ ಮಾತ್ರ ಏಳುತ್ತಿಲ್ಲ.
ಈ ಹೃದಯವಿದ್ರಾವಕ ಘಟನೆ ನಿನ್ನೆ ಬೆಳಗ್ಗೆ ಮಧ್ಯ ಪ್ರದೇಶದ ದಮೊಹ್ ನಲ್ಲಿ ಭೋಪಾಲ್ ನಿಂದ 250 ಕಿಲೋ ಮೀಟರ್ ದೂರದಲ್ಲಿ ನಡೆದಿದೆ.
ಮಹಿಳೆ ರೈಲಿನಿಂದ ಬಿದ್ದಿರಬಹುದು ಇಲ್ಲವೇ ರೈಲು ಢಿಕ್ಕಿ ಹೊಡೆದು ಮೃತಪಟ್ಟಿರಬಹುದು. ತಲೆ ಬಡಿದು ಕೆಳಗೆ ಬಿದ್ದು ರಕ್ತ ಸುರಿದು ಮೃತಪಟ್ಟಿರಬಹುದು. ಆದರೆ ಅದು ಕೂಡ ತಕ್ಷಣಕ್ಕೆ ಆಗಿರಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.
ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ಸುತ್ತಮುತ್ತಲಿನ ನಿವಾಸಿಗಳು ಮಗು ತನ್ನ ತಾಯಿಯ ಎದೆಹಾಲನ್ನು ಕುಡಿಯಲು ಪ್ರಯತ್ನಿಸುತ್ತಿರುವುದು ಮತ್ತು ಬಿಸ್ಕೆಟ್ ನ್ನು ಚೀಪುತ್ತಿರುವುದನ್ನು ಗಮನಿಸಿದರು.
ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ತಲುಪಿಸಿದರು.ನೋಡುಗರು ವಿಡಿಯೊ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು. ಕೆಲವೇ ಗಂಟೆಯಲ್ಲಿ ಫೋಟೋ ವೈರಲ್ ಆಗಿ ಮಕ್ಕಳ ಕಲ್ಯಾಣ ಕಾರ್ಯಕರ್ತರಿಗೆ ಕೂಡ ತಲುಪಿತು.
ಜನರು ನೋಡುವ ಮೊದಲೇ ತಾಯಿ ಮೃತಪಟ್ಟಿದ್ದು ಮಗುವಿಗೆ ಗಾಯಗಳು ಕೂಡ ಆಗಿಲ್ಲ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಅನಿಲ್ ಮರವಿ ತಿಳಿಸಿದ್ದಾರೆ.
ತಾಯಿ ಬೀಳುವಾಗ ಮಗುವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರಬೇಕು. ಅದರಿಂದಾಗಿ ಮಗು ಬದುಕುಳಿದಿದೆ.ಗಂಭೀರ ಗಾಯಗೊಂಡ ಆಕೆ ಸಾಯುವ ಮುನ್ನ ಬಿಸ್ಕೆಟ್ ಪೊಟ್ಟಣವನ್ನು ತೆರೆದು ಮಗುವಿಗೆ ಕೊಟ್ಟಿರಬೇಕು. ಅಲ್ಲದೆ ಮಗುವಿಗೆ ಹಾಲುಣಿಸಲು ಪ್ರಯತ್ನಿಸಿರಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.
ಮಗು ಒಂದೇ ಸಮನೆ ಅಳುತ್ತಿರುವ ದೃಶ್ಯ ಸ್ಥಳೀಯರು ಮತ್ತು ಅಧಿಕಾರಿಗಳ ಮನಕರಗಿಸಿದೆ. ಮಗು ಬಳಿ ಪ್ರವೇಶ ಶುಲ್ಕ 10 ರೂಪಾಯಿಯನ್ನು ನೀಡಲಾಗಲಿಲ್ಲ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ವಾರ್ಡ್ ಬಾಯ್ ತರುಣ್ ತಿವಾರಿ ನೀಡಿದನು. ಇದೀಗ ಮಗು ಮಕ್ಕಳ ಅನಾಥಾಶ್ರಮದಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com