ಅತ್ಯಾಚಾರ ಪ್ರಕರಣ: ಗಾಯತ್ರಿ ಪ್ರಜಾಪತಿಗೆ ಮಂಜೂರಾಗಿದ್ದ ಜಾಮೀನು ವಜಾ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ...
ಮಾಜಿ ಸಚಿವ ಗಾಯತ್ರಿ ಪ್ರಜಾಪತಿ
ಮಾಜಿ ಸಚಿವ ಗಾಯತ್ರಿ ಪ್ರಜಾಪತಿ
ಲಕ್ನೋ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇತರರಿಗೆ ಲಕ್ನೋದ ಸೆಷನ್ಸ್ ಕೋರ್ಟ್ ನೀಡಿದ ಜಾಮೀನನ್ನು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಶುಕ್ರವಾರ ರದ್ದುಪಡಿಸಿದೆ. 
ಹೈಕೋರ್ಟ್ ಪೀಠ ತನ್ನ ಆದೇಶದಲ್ಲಿ ಸೆಷನ್ಸ್ ಕೋರ್ಟ್ ಆತುರದಿಂದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ.ಇದಕ್ಕೂ ಮುನ್ನ ಮೇ 12ರಂದು ಲಕ್ನೋ ನ್ಯಾಯ ಪೀಠ, ಪ್ರಜಾಪತಿಗೆ ಜಾಮೀನು ನೀಡದಂತೆ ಈ ಹಿಂದೆ ನೀಡಿದ್ದ ನಿರ್ಧಾರವನ್ನು ಎತ್ತಿಹಿಡಿಯಿತು.
ತಲೆಮರೆಸಿಕೊಂಡಿರುವ ಪಿಂಟು ಸಿಂಗ್ ಮತ್ತು ವಿಕಾಸ್ ವರ್ಮ ಅವರ ಜಾಮೀನನ್ನು ಕೂಡ ರದ್ದುಪಡಿಸಲಾಗಿದ್ದು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. 
ಸಹ ಆರೋಪಿ ವಿಕಾಸ್ ವರ್ಮಾಗೆ 2 ದಿನಗಳೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಮೇ 4ರಂದು ವಿಕಾಸ್ ಸ್ವರೂಪ್ ಗೆ ಸೂಚಿಸಿತ್ತು.
ಗಾಯತ್ರಿ ಪ್ರಜಾಪತಿ ಮತ್ತು ಇಬ್ಬರು ಆರೋಪಿಗಳಿಗೆ ತ್ವರಿತ ನ್ಯಾಯಾಲಯ ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಆದರೆ ಅಲಹಾಬಾದ್ ಹೈ ಕೋರ್ಟ್ ಜಾಮೀನು ಆದೇಶವನ್ನು ವಜಾಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com