ಅಭ್ಯರ್ಥಿಗಳು ತಮ್ಮ ಮತ್ತು ಸಂಗಾತಿಯ ಆದಾಯ ಮೂಲವನ್ನು ಘೋಷಿಸಬೇಕು: ಚುನಾವಣಾ ಆಯೋಗ

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಇನ್ನು ಮುಂದೆ ನಾಮಪತ್ರ ಸಲ್ಲಿಸುವಾಗ ತಮ್ಮ ಮತ್ತು...
ಚುನಾವಣಾ ಆಯೋಗ
ಚುನಾವಣಾ ಆಯೋಗ
Updated on
ನವದೆಹಲಿ:  ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಇನ್ನು ಮುಂದೆ ನಾಮಪತ್ರ ಸಲ್ಲಿಸುವಾಗ ತಮ್ಮ ಮತ್ತು ಸಂಗಾತಿಯ ಆದಾಯ ಮೂಲವನ್ನು ಘೋಷಿಸಬೇಕು ಎಂಬ ನಿಯಮ ರೂಪಿಸಲಾಗಿದ್ದು ಹೆಚ್ಚು ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ತರಲು ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ  ಹೇಳಿದೆ.
ಚುನಾವಣಾ ನಿಯಮಗಳಿಗೆ ಸಂಬಂಧಪಟ್ಟಂತೆ ಸರ್ಕಾರ ತಿದ್ದುಪಡಿ ತಂದಿದ್ದು, ಅದರಲ್ಲಿ ಪತಿ ಪತ್ನಿಯರ ಆದಾಯದ ಮೂಲಕ್ಕೆ ಸಂಬಂಧಪಟ್ಟಂತೆ ಅಫಿಡವಿಟ್ಟಿನಲ್ಲಿ ಹೊಸ ಕಾಲಂನ್ನು ಸೇರಿಸಿತ್ತು. ಈ ಸಂಬಂಧ ಚುನಾವಣಾ ಆಯೋಗ ಕಳೆದ ವರ್ಷ ಕಾನೂನು ಸಚಿವಾಲಯವನ್ನು ಸಂಪರ್ಕಿಸಿತ್ತು. ಇದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಬಹುದೆಂಬುದು ಆಯೋಗದ ಅಭಿಪ್ರಾಯವಾಗಿದೆ. 
ಈ ವರ್ಷದ ಆರಂಭಕ್ಕೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದ್ದ ಅಫಿಡವಿಟ್ಟಿನಲ್ಲಿ, ಚುನಾವಣಾ ಆಯೋಗ ಆರೋಗ್ಯಕರ ಪ್ರಜಾಪ್ರಭುತ್ವ ದೇಶಕ್ಕೆ ಅಗತ್ಯವಾಗಿದ್ದು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಮತ್ತು ಅವರ ಕುಟುಂಬದವರ ಆದಾಯದ ಮೂಲವನ್ನು ಮತದಾರರು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿತ್ತು.
ಹೊಸ ಕಾನೂನನ್ನು ಕಾನೂನು ಸಚಿವಾಲಯ ಏಪ್ರಿಲ್ 7ರಂದು ಹೊರಡಿಸಿದೆ.
ಈ ಮುನ್ನ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ತನ್ನ ಆಸ್ತಿ ಮತ್ತು ಹೊಣೆಗಾರಿಕೆಯನ್ನು, ಸಂಗಾತಿ ಆಸ್ತಿ ಮತ್ತು ಮೂವರು ಅವಲಂಬಿತರ ಬಗ್ಗೆ ಅರ್ಜಿ ನಮೂನೆ 26ರಲ್ಲಿ ವಿವರ ಸಲ್ಲಿಸಬೇಕಾಗಿತ್ತು. ಆದರೆ ಆದಾಯದ ಮೂಲವನ್ನು ಬಹಿರಂಗಪಡಿಸಬೇಕಾಗಿರಲಿಲ್ಲ.
ಇಲ್ಲಿಯವರೆಗೆ ಭಾರತೀಯ ಪ್ರಜೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿತ್ತು. ಆದರೆ ಈಗ ನಿರ್ದಿಷ್ಟ ಕಾಲಂವೊಂದಿದ್ದು, ಅದರಲ್ಲಿ ಅಭ್ಯರ್ಥಿ ಭಾರತೀಯ ನಾಗರಿಕ ಹೌದೇ ಅಲ್ಲವೇ ಎಂದು ಕೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com