ರಾಯ್ ಪುರ: ಚತ್ತೀಸ್ ಗಢದ ಕಂಕರ್ ಜಿಲ್ಲೆಯಲ್ಲಿ ನಕ್ಸಲರಿಗೆ ಹಣ ಸಾಗಿಸುತ್ತಿದ್ದ ಟೆಂಡೂ ಲೀಫ್ ವ್ಯಾಪಾರಿ ಹಾಗೂ ಆತನ ಇಬ್ಬರು ಸಹಚರರನ್ನು ಶನಿವಾರ ಬಂಧಿಸಲಾಗಿದ್ದು, ಬಂಧಿತರಿಂದ 78 ಲಕ್ಷ ರುಪಾಯಿ ಜಪ್ತಿ ಮಾಡಲಾಗಿದೆ.
ಇಂದು ಬಿಎಸ್ಎಫ್ ಯೋಧರು ಹಾಗೂ ಚತ್ತೀಸ್ ಗಢ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವ್ಯಾಪಾರಿ ಕಶ್ಯಪ್ ಪಟೇಲ್ ಹಾಗೂ ಆತನ ಸಹಚರರಾದ ರವೀಂದ್ರ ಯಶ್ವಂತ್ ಮತ್ತು ನಾರಾಯಣ್ ರಂಗರಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದಿಂದ ಈ ಮೂವರು ಬಂಧಿತ ಆರೋಪಿಗಳು ಗೊಂಡಿಯಾ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ)ಗೆ ಹಣ ಹಸ್ತಾಂತರಿಸಲು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ವ್ಯಾಪಾರಿ 78 ಲಕ್ಷ ರುಪಾಯಿ ಹಫ್ತಾವನ್ನು ನಕ್ಸಲರಿಗೆ ನೀಡಲು ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಬಂಧಿತ ಆರೋಪಿಗಳನ್ನು ನಾಳೆ ಕೋರ್ಟ್ ಗೆ ಹಾಜರುಪಡಿಸುವುದಾಗಿ ಕಂಕರ್ ಉಪ ಪೊಲೀಸ್ ಮಹಾ ನಿರ್ದೇಶಕ ರತನ್ ಲಾಲ್ ದಂಗಿ ಅವರು ಹೇಳಿದ್ದಾರೆ.