ಆನೆ
ದೇಶ
ಪ್ರವಾಸಿಗರಿದ್ದ ಸಫಾರಿ ಜೀಪ್ ಅನ್ನು ಅಟ್ಟಿಸಿಕೊಂಡು ಬಂದ ಆನೆ
ಉತ್ತರಾಖಂಡ್ ನ ರಾಮನಗರ್ ದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಯೊಂದು ಸಫಾರಿ ಜೀಪನ್ನು ಅಟ್ಟಾಡಿಸಿಕೊಂಡು ಹೋದಂತಹ ಘಟನೆ...
ರಾಮನಗರ್: ಉತ್ತರಾಖಂಡ್ ನ ರಾಮನಗರ್ ದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಯೊಂದು ಸಫಾರಿ ಜೀಪನ್ನು ಅಟ್ಟಾಡಿಸಿಕೊಂಡು ಹೋದಂತಹ ಘಟನೆ ನಡೆದಿದೆ.
ಸಫಾರಿ ಜೀಪ್ ನಲ್ಲಿ ಪ್ರವಾಸಿಗರು ವನ್ಯಜೀವಿಗಳನ್ನು ನೋಡಲೆಂದು ತೆರಳಿದ್ದಾಗ ಸಫಾರಿ ಜೀಪ್ ಅನ್ನು ಕಂಡ ಆನೆ ಅದನ್ನು ಅಟ್ಟಾಟಿಸಿಕೊಂಡು ಬಂದಿದೆ. ಈ ವೇಳೆ ಜೀಪ್ ಚಾಲಕ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಆನೆ ತಮ್ಮ ಕಾರನ್ನು ಅಟ್ಟಿಸಿಕೊಂಡು ಬಂದ ದೃಶ್ಯಗಳನ್ನು ಪ್ರವಾಸಿಗರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ