ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಸೀಸ್ ಉಗ್ರ ಸಂಘಟನೆ ಪರ ಘೋಷಣೆ ಗೀಚುಬರಹ: ದೂರು ದಾಖಲು
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಸೀಸ್ ಉಗ್ರ ಸಂಘಟನೆ ಪರವಾದ ಘೋಷ ವಾಕ್ಯ ಇರುವ ಗೀಚು ಬರಗ ಕಂಡುಬಂದಿದ್ದು, ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆಯ (ಡಿಯುಎಸ್ ಯು)ಕಾರ್ಯದರ್ಶಿ ಅಂಕಿತ್ ಸಂಗ್ವಾನ್...
ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಸೀಸ್ ಉಗ್ರ ಸಂಘಟನೆ ಪರವಾದ ಘೋಷ ವಾಕ್ಯ ಇರುವ ಗೀಚು ಬರಗ ಕಂಡುಬಂದಿದ್ದು, ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆಯ (ಡಿಯುಎಸ್ ಯು)ಕಾರ್ಯದರ್ಶಿ ಅಂಕಿತ್ ಸಂಗ್ವಾನ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ನ ವಿಭಾಗದಲ್ಲಿ ಇಸೀಸ್ ಉಗ್ರ ಸಂಘಟನೆ ಪರ ಗೀಚುಬರಹಗಳು ಕಂಡುಬಂದಿದ್ದು, ಕಾಲೇಜು ಭದ್ರತಾ ಸಿಬ್ಬಂದಿಗಳಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಅಂಕಿತ್ ಸಂಗ್ವಾನ್ ಹೇಳಿದ್ದಾರೆ.
ಕಾಲೇಜಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗಿದೆ, ಕಾಶ್ಮೀರ ಆಜಾದಿ, ದೇಶವನ್ನು ತುಂಡರಿಸುವ ಉದ್ದೇಶ ಹೊಂದಿರುವವರೇ ಈ ಕೆಲಸ ಮಾಡಿದ್ದಾರೆ ಎಂದು ಸಂಗ್ವಾನ್ ಹೇಳಿದ್ದಾರೆ.