ನವದೆಹಲಿ: ದೀರ್ಘಾವಧಿಯ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿದೇಶ ಪ್ರವಾಸ ಕೈಗೊಂಡಿದ್ದು, ಜರ್ಮನಿ, ಸ್ಪೇನ್, ರಷ್ಯಾ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ.
ಭಾರತದ ಆರ್ಥಿಕತೆ ಸದೃಢಗೊಳ್ಳಲು ಹೂಡಿಕೆಯನ್ನು ಆಕರ್ಷಿಸಲು ಈ ವಿದೇಶ ಪ್ರವಾಸ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಫೆಸ್ ಬುಕ್ ನಲ್ಲಿ ವಿದೇಶ ಪ್ರವಾಸದ ವಿವರಗಳನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೆ ಮಾಡಿದ್ದಾರೆ.
29 ರಂದು ಜರ್ಮನಿ ತಲುಪಲಿರುವ ಪ್ರಧಾನಿ ಮೋದಿ 4 ನೇ ಭಾರತ-ಜರ್ಮನಿ ಇಂಟರ್ ಗೌರ್ನಮೆಂಟಲ್ ಕನ್ಸಲ್ಟೇಷನ್ಸ್(ಐಜಿಸಿ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜರ್ಮನಿ ಭಾರತದ ಅತ್ಯಂತ ಮೌಲ್ಯಯುತ ಮಿತ್ರರಾಷ್ಟ್ರವಾಗಿದ್ದು, ಭಾರತದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಮೇ.30 ರಂದು ಐಜಿಸಿ ಸಭೆ ನಡೆಯಲಿದ್ದು ಮೇ.30-31 ರಂದು ಪ್ರಧಾನಿ ಮೋದಿ ಸ್ಪೇನ್ ಗೆ ಭೇಟಿ ನೀಡಲಿದ್ದಾರೆ.