ಮಾಯಾವತಿ
ದೇಶ
ಬಿಎಸ್ ಪಿ ರಾಜ್ಯಾಧ್ಯಕ್ಷರ ವಿರುದ್ಧ ಚಾರ್ಜ್ ಶೀಟ್: ಮಾಯಾವತಿಗೆ ಸಂಕಷ್ಟ
ಉತ್ತರ ಪ್ರದೇಶ ಬಿಎಸ್ ಪಿ ರಾಜ್ಯ ಘಟಕದ ಅಧ್ಯಕ್ಷ ರಾಮಾ ಆಚಾರ್ ರಾಜ್ ಬರ್ ವಿರುದ್ಧ ವಿಚಕ್ಷಣಾ ದಳ ಚಾರ್ಜ್ ಶೀಟ್ ಸಲ್ಲಿಸಿದ್ದು ಮಾಯಾವತಿ ಅವರಿಗೆ ಸಂಕಷ್ಟ ಎದುರಾಗಿದೆ...
ಲಕ್ನೋ: ಉತ್ತರ ಪ್ರದೇಶ ಬಿಎಸ್ ಪಿ ರಾಜ್ಯ ಘಟಕದ ಅಧ್ಯಕ್ಷ ರಾಮಾ ಆಚಾರ್ ರಾಜ್ ಬರ್ ವಿರುದ್ಧ ವಿಚಕ್ಷಣಾ ದಳ ಚಾರ್ಜ್ ಶೀಟ್ ಸಲ್ಲಿಸಿದ್ದು ಮಾಯಾವತಿ ಅವರಿಗೆ ಸಂಕಷ್ಟ ಎದುರಾಗಿದೆ.
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಮ್ ಆಚಲ್ ರಾಬಬರ್ ವಿರುದ್ಧ 4 ಕೋಟಿ ಅಕ್ರಮ ಆಸ್ತಿ ಸಂಪಾದನೆ ಕೇಸ್ ಸಂಬಂಧ ಅಂತಿಮ ಚಾರ್ಜ್ ಶೀಟ್ ಅನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಲ್ಲಿಸಲಾಗಿದೆ.
ಬಿಸ್ ಸಿ ಪಿ ನಾಯಕರ ವಿರುದ್ಧ ಸಲ್ಲಿಸಿರುವ ಚಾರ್ಜ್ ಶೀಟ್ ಗೆ ಉತ್ತರ ಪ್ರದೇಶ ಸರ್ಕಾರ ಒಪ್ಪಿಗೆ ನೀಡಿದರೆ ವಿಚಾರಣಾ ಪ್ರಕ್ರಿಯೆ ಆರಂಭವಾಗಲಿದೆ.
2007-12ರ ಅವಧಿಯಲ್ಲಿ ರಾಜಬರ್ 34 ಲಕ್ಷ ರು ತಮ್ಮ ಆದಾಯ ಘೋಷಿಸಿದ್ದರು, ಆದರೆ ಅವರು ಸುಮಾರು 4ಕೋಟಿ ರೂ ಹಣ ವ್ಯಯಿಸಿರುವುದು ಬಹಿರಂಗವಾಗಿದೆ, 2007-12ರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಅಧಿಕಾರ ನಡೆಸುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ